ಕುಕ್ಕಳ ಬೆಟ್ಟು ಅಂಗನವಾಡಿ ಕೇಂದ್ರ ದಲ್ಲಿ 80ನೇ ವರ್ಷದ ಸ್ವಾತಂತ್ರಉತ್ಸವ ಆಚರಣೆ

0

ಕುಕ್ಕಳ ಬೆಟ್ಟು ಅಂಗನವಾಡಿ ಕೇಂದ್ರ ದಲ್ಲಿ 80ನೇ ವರ್ಷದ ಸ್ವಾತಂತ್ರಉತ್ಸವ ವನ್ನು ಆಚರಿಸಲಾಯಿತು.ಮುಖ್ಯ ಅತಿಥಿಯಾಗಿ ಆಗಮಿಸಿದ ಜೆಸಿ ಪ್ರಸನ್ನ ಶೆಟ್ಟಿ ಪದೆಂಜಿಲ ಇವರು ಭಾರತದ ತ್ರಿವರ್ಣಧ್ವಜ ಹಾರಿಸಿ ಸ್ವಾತಂತ್ರಕ್ಕಾಗೆ ಹೋರಾಡಿದ ವೀರರ ಬಗ್ಗೆ ಮಾತಾಡಿ ಅವರಿಗೆ ನಮನವನ್ನು ಸಲ್ಲಿಸಿದರು.

ಇನ್ನೊರ್ವ ಅತಿಥಿ ಸ್ಥಳೀಯ ಮುಖಂಡರು ಆಗಿರುವ ಕೋಟ್ಯಾಪ್ಪ ಪೂಜಾರಿ ಕುಕ್ಕಳ ಅವರು ಎಲ್ಲರಿಗೂ ಶುಭ ಹಾರೈಸಿದರು. ಮಕ್ಕಳ ಪೋಷಕರ ಪರವಾಗಿ ಮಾತಾಡಿದ ಮಹಿಂದ್ರಾ ಜೈನ್ ಇವರು ಮಕ್ಕಳ ಆರೋಗ್ಯದ ಕಾಳಜಿ ಬಗ್ಗೆ ಮಾತಾಡಿ ಎಲ್ಲರಿಗೂ ಶುಭ ಹಾರೈಸಿದರು.

ಮಡಂತ್ಯಾರ್ ಹಾ ಊ ಸ ಸಂಘ ಇದರ ಮಾಜಿ ನಿರ್ದೇಶಕ ಸೌಮ್ಯ ಹಲೆಕ್ಕಿ,ಸ್ಥಳೀಯ ಪ್ರಮುಖರಾದ ರಾಮಣ್ಣ ಮೂಲ್ಯ ಹಲೆಕ್ಕಿ, ಯಶೋಧರ ಪೂಜಾರಿ, ರಾಜೇಶ್ ಕುಕ್ಕಳ, ಸಂದೇಶ್ ಕುಕ್ಕಳ, ಕೊರಗಪ್ಪ ಆಚಾರ್ಯ ಕುಕ್ಕಳ ಮತ್ತು ಹಲವು ಸ್ಥಳೀಯರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಸ್ಥಳೀಯ ಆಶಾ ಕಾರ್ಯಕರ್ತೆ ಉಷಾ ಪಾಟೀಲ್ ಹಾಗೂ ಅಂಗನವಾಡಿ ಸಹಾಯಕಿ ದೀಕ್ಷಿತಾ ಸಹಕರಿಸಿದರು.ಅಧ್ಯಕ್ಷತೆ ವಹಿಸಿದ ಅಂಗನವಾಡಿ ಮುಖ್ಯಸ್ಥರಾದ ಪುಷ್ಪವತಿ ಟೀಚರ್ ಇವರು ಕಾರ್ಯಕ್ರಮ ನಿರೂಪಿಸಿ ಎಲ್ಲರಿಗೂ ಧನ್ಯವಾದವಿತ್ತರು.ಆಗಮಿಸಿದ ಎಲ್ಲರಿಗೂ ಸಿಹಿ ತಿಂಡಿ ನೀಡುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here