







ಮಾಲಾಡಿ: ಸ ಹಿ ಪ್ರಾ ಶಾಲೆ ಸೋಣಂದೂರು ಇಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹಳೆ ವಿದ್ಯಾರ್ಥಿ ಸಂಘ ಹಾಗೂ ಪೋಷಕರ ಸಹಕಾರದೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ಉದಯ್ ಚಂದ್ರ , ಮಾಲಕರು ಪೆಟ್ರೋಲ್ ಬಂಕ್ ಕೊಲ್ಪದಬೈಲು ಇವರು ಧ್ವಜಾರೋಹಣ ನೆರವೇರಿಸಿ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಹೋರಾಟಗಾರರನ್ನು ಸ್ಮರಿಸಿದರು.


ಮುಖ್ಯ ಅತಿಥಿಗಳಾಗಿ ಮಾಲಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಪುನೀತ್ ಕುಮಾರ್, ಮಾಜಿ ಸದಸ್ಯರುಗಳಾದ ಕೃಷ್ಣ ಶೆಟ್ಟಿ, ಶ್ರೀಮತಿ ರುಬಿನ, ಶಾಲಾಭಿಮಾನಿಗಳಾದ ಉಪೇಂದ್ರ ಆಚಾರ್ಯ, ಜಗದೀಶ್ ಆಚಾರ್ಯ, ಹಳೆ ವಿದ್ಯಾರ್ಥಿಯಾದ ಇಮ್ತಿಯಾಜ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ನಾಗೇಶ್ ಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಯೋಗೀಶ್, ಮಹಮ್ಮಯಿ ಕಟ್ಟೆ ಫ್ರೆಂಡ್ಸ್ ಇದರ ಅಧ್ಯಕ್ಷರಾದ ಮೋಹನ್ ನಾಯ್ಕ, ಶ್ರೀ ಕೃಷ್ಣ ಭಜನಾ ಮಂದಿರ ಪಣಕಜೆ ಇದರ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಅರ್ಕಜೆ. ಶಿವರಾಯ ಪ್ರಭು ಅಟ್ಲ, ಧರ್ಮಸ್ಥಳ ಸೇವಾ ಪ್ರತಿನಿಧಿ ಮನೋಹರಿ ಉಪಸ್ಥಿತರಿದ್ದರು. ಧರಣೇಂದ್ರ ಕೆ ಶಿಕ್ಷಕರು ಕೆ ಪಿ ಎಸ್ ಪುಂಜಾಲಕಟ್ಟೆ ಇವರು ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಹಳೆ ವಿದ್ಯಾರ್ಥಿಗಳು, ಪೋಷಕರು, ಶಾಲಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ಆಶಾ ಕಾರ್ಯಕರ್ತೆ ಉಪಸ್ಥಿತರಿದ್ದರು. ಸಹಶಿಕ್ಷಕಿ ರಕ್ಷಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ಅನಿತಾ ರೇಷ್ಮಾ ಡಿಸೋಜ ಸ್ವಾಗತಿಸಿ, ಸಹಶಿಕ್ಷಕಿ ರಶ್ಮಿ ವಂದನಾರ್ಪಣೆಗೈದರು.









