ಧರ್ಮಸ್ಥಳ ಚಂದ್ರಗಿರಿ ನಗರ ಪೊಸೋಳಿಕೆ ಅಂಗನವಾಡಿ ಕೇಂದ್ರದಲ್ಲಿ 80ನೇ ಸ್ವಾತಂತ್ರೋತ್ಸವ ದಿನಾಚರಣೆ

0

ಧರ್ಮಸ್ಥಳ ಗ್ರಾಮದ ಚಂದ್ರಗಿರಿ ನಗರ ಪೊಸೋಳಿಕೆ ಅಂಗನವಾಡಿ ಕೇಂದ್ರದಲ್ಲಿ 80ನೇ ಸ್ವಾತಂತ್ರೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಮಾಜಿ ಸೈನಿಕರಾದ ರವಿಪ್ರಸಾದ್ರವರು ನೆರವೇರಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಸ್ವಾತಂತ್ರ್ಯ ದಿನಾಚರಣೆಯ ಸಂದೇಶವನ್ನು ತಿಳಿಸಿದರು. ಇವರನ್ನು ಬಾಲ ವಿಕಾಸ ಸಮಿತಿ ವತಿಯಿಂದ ಗೌರವಿಸಲಾಯಿತು.

ಬಾಲ ವಿಕಾಸ ಸಮಿತಿಯ ಗೌರವ ಸಲಹೆಗಾರರಾದ ಸಾಂಸ್ಕೃತಿಕ ಸಂಘಟಕ ಬಿ, ಭುಜಬಲಿ, ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಸವಿತಾ ಮಂಜುನಾಥ್, ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಶರ್ಮಿಳ ಹರ್ಷ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ರೇವತಿ ಮುಖ್ಯ ಸಲಹೆಗಾರ ಸುರೇಶ ಗೌಡ, ಪ್ರವೀಣ್ ದೇವಾಡಿಗ ಸುಭಾಷ್ ಚಂದ್ರ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಧ್ಯಾರವರು ದೇಶಭಕ್ತಿ ಗೀತೆ ಹಾಡಿದರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹರ್ಷ ಜೈನ್ ರವರು ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಮಾಡಿದರು, ಗ್ರಾಮ ಪಂಚಾಯತ್ ಮತ್ತು ಶ್ರೇಯುತ ಸುಭಾಷ್ ಚಂದ್ರ ಜೈನ್ ಚಂದ್ರಗಿರಿ ನಗರ ಇವರ ವತಿಯಿಂದ ಸಿಹಿತಿಂಡಿಯನ್ನು ಎಲ್ಲರಿಗೂ ನೀಡಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳು ಶ್ರೀ ಶಕ್ತಿ ಸಂಘದ ಸದಸ್ಯರು ಮಕ್ಕಳ ಪೋಷಕರು ಆಶಾ ಕಾರ್ಯಕರ್ತೆ ಮಲ್ಲಿಕಾ, ಸಹಾಯಕಿ ಭಾಗ್ಯ, ಹಾಗೂ ಊರಿನ ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಅತಿಥಿಗಳನ್ನು ಅಂಗನವಾಡಿ ಕಾರ್ಯಕರ್ತೆ ಬಿಂದುರವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here