







ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಬೆಳ್ತಂಗಡಿ ಇದರ ವತಿಯಿಂದ ಬೆಳ್ತಂಗಡಿ ವಲಯದ ಕನ್ನಾಜೆ ಕಾರ್ಯಕ್ಷೇತ್ರದ ವತಿಯಿಂದ ಲಾಯಿಲ ಶ್ರೀ ಗುರು ರಾಘವೇಂದ್ರ ಮಠದ ವಠಾರದಲ್ಲಿ ಸ್ವಚ್ಛತಾ ಶ್ರಮದಾನ ಆ. 13 ರಂದು ನಡೆಸಿಕೊಡಲಾಯಿತು.


ಈ ಸಂದರ್ಭದಲ್ಲಿ ರಾಘವೇಂದ್ರ ಮಠದ ಕಾರ್ಯದರ್ಶಿ ವಸಂತ ಸುವರ್ಣ, ಮಠದ ಸಿಬ್ಬಂದಿ ವರ್ಗ, ಯೋಜನೆಯ ವಲಯದ ಮೇಲ್ವಿಚಾರಕ ಜಿ.ರವಿ ಒಕ್ಕೂಟದ ಅಧ್ಯಕ್ಷೆ ಯಶೋಧ ಹುಣ್ಸೆಕಟ್ಟೆ, ಒಕ್ಕೂಟದ ಅಧ್ಯಕ್ಷ ದಯಾನಂದ ಕೋಟ್ಯಾನ್ , ಬೆಳ್ತಂಗಡಿ ವಲಯದ ಭಜನಾ ಮಂಡಳಿ ಅಧ್ಯಕ್ಷ ಗಣೇಶ ಕನ್ನಾಜೆ ರತ್ನಶ್ರೀ ಜ್ಞಾನವಿಕಾಸ ಕೇಂದ್ರದ ಸದಸ್ಯರು ಮತ್ತು ಸ್ಥಳೀಯ ಸಂಘದ ಸದಸ್ಯರು ಹಾಗೂ ಸೇವಾ ಪ್ರತಿನಿಧಿಗಳಾದ ಗುಣವತಿ ,ಜ್ಯೋತಿ , ಕೇಶವ ಉಪಸ್ಥಿತರಿದ್ದರು ಮಠದ ವತಿಯಿಂದ ಭಾಗವಹಿಸಿದ ಸದಸ್ಯರಿಗೆ ಉಪಹಾರ ವನ್ನು ಏರ್ಪಡಿಸಲಾಗಿತ್ತು ಕ್ಷೇತ್ರದ ವತಿಯಿಂದ ಭಾಗವಹಿಸಿದವರಿಗೆ ಮಠದ ವತಿಯಿಂದ ವಸಂತ ಸುವರ್ಣ ಕ್ಷೇತ್ರದ ವತಿಯಿಂದ ಮಠಕ್ಕೆ ದೊರೆದಿರುವ ಸಹಕಾರವನ್ನು ಶ್ಲಾಘಿಸಿದರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮದ ಅಡಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿಕೊಟ್ಟ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.









