ರೋಟರಿ ಸಮುದಾಯ ದಳ ಕಲ್ಮಂಜ ಘಟಕದ ಪದಾಧಿಕಾರಿಗಳ ಆಯ್ಕೆ

0

ರೋಟರೀ ಕ್ಲಬ್ ಬೆಳ್ತಂಗಡಿ ಇದರ ಅಂಗ ಸಂಸ್ಥೆಯಾದ ರೋಟರೀ ಸಮುದಾಯ ದಳ (ಆರ್. ಸಿ.ಸಿ) ಇದರ ಕಲ್ಮಂಜ ದ 2026 -27 ಸಾಲಿನ ಪದಾಧಿಕಾರಿಗಳ ಆಯ್ಕೆ ಸಿದ್ದಬೈಲು ಅಂಗನವಾಡಿಯಲ್ಲಿ ನಾಗೇಶ್ ಕಲ್ಮಂಜ ಅಧ್ಯಕ್ಷತೆಯಲ್ಲಿ ನಡೆಯಿತು.

ಚೇರ್ಮನ್ ಅರ್.ಸಿ.ಸಿ.ರೋಟರಿ ಕ್ಲಬ್ ಬೆಳ್ತಂಗಡಿ ವೆಂಕಟೇಶ್ವರ ಭಟ್ ಕೆ.ಜೆ.ರವರ ಉಪಸ್ಥಿತಿಯಲ್ಲಿ ಕಲ್ಮಂಜ ಘಟಕದ ಅಧ್ಯಕ್ಷರಾಗಿ ಬಿ.‌ ಶ್ರೀನಿವಾಸ ರಾವ್, ಉಪಾಧ್ಯಕ್ಷರಾಗಿ ಗುರುಪ್ರಸಾದ್ ಹೆಬ್ಬಾರ್, ಕಾರ್ಯದರ್ಶಿಯಾಗಿ ವಸಂತಿ, ಜೊತೆ ಕಾರ್ಯದರ್ಶಿ ದಿನೇಶ್ ಗೌಎ, ಖಜಾಂಚಿ ರಾಘವ ಕಲ್ಮಂಜ, ಸಮುದಾಯ ಸೇವೆ ಯೋಗೀಶ್ ಪರಾಂಜಪೆ, ಕ್ಲಬ್ ಸೇವೆ ಸತೀಶ್ ಟಿ, ಆರೋಗ್ಯ ಸೇವೆ ಸರೋಜಿನಿ, ಸದಸ್ಯರಾಗಿ ನಾಗೇಶ್ ಕಲ್ಮಂಜ, ಜಾನಕಿ, ಪವಿತ್ರ, ಜಯಂತ್ ರಾವ್, ವಿದ್ಯಾ, ಕೃಷ್ಣಮೂರ್ತಿ ಹೆಬ್ಬಾರ್, ಪ್ರಕಾಶ್ ಭಟ್ ಜಯಂತ್ ರಾವ್ ಆಯ್ಕೆಯಾದರು.

ಕಳೆದ ವರ್ಷದ ಆರ್.ಸಿ.ಸಿ ಕಲ್ಮಂಜದ ಅದ್ಯಕ್ಷ ನಾಗೇಶ್ ಕಲ್ಮಂಜ ಅವರಿಂದ ಬಿ. ಶ್ರೀನಿವಾಸ ರಾವ್ ಇವರಿಗೆ ಅಧಿಕಾರ ಹಸ್ತಾಂತರಿಸುವ ಪದಗ್ರಹಣ ಸಮಾರಂಭವನ್ನು ಮುಂಡಾಜೆಯಲ್ಲಿ ನಡೆಸುವುದೆಂದು ನಿರ್ಣಯಿಸಲಾಯಿತು.

LEAVE A REPLY

Please enter your comment!
Please enter your name here