






ಮಡಂತ್ಯಾರು:ಮಹಾತ್ಮಗಾಂಧಿ ಮಡಂತ್ಯಾರು ಗ್ರಾಮ ಪಂಚಾಯತ್ ನ 2026-27ನೇ ಪ್ರಥಮ ಸುತ್ತಿನ ಗ್ರಾಮ ಸಭೆಯು ಆ. 13ರಂದು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಆಡಳಿತ ಅಧಿಕಾರಿ ಲೋಕೇಶ್ ಕೆ ಇವರ ಅದ್ಯಕ್ಷತೆಯಲ್ಲಿ ಜರಗಿತು.

ನೋಡೆಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಧನಂಜಯ್ ಎನ್ ಎಸ್ ಭಾಗವಹಿಸಿ ಸಭೆಯನ್ನು ನಡೆಸಿಕೊಟ್ಟರು. ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಡಿ. ಪಿ. ವಾರ್ಡ್ ಸಭೆಯ ನಡವಳಿಗಳು, ವರದಿ, ಲೆಕ್ಕ ಪತ್ರ ಮಂಡಿಸಿದರು.


ಇಲಾಕಾಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಮಾಹಿತಿ ನೀಡಿದರು.ಸಭೆಯಲ್ಲಿ ಮಡಂತ್ಯಾರಿನಿಂದ ಬಂಗೇರ ಕಟ್ಟೆ ರಸ್ತೆಯ ಚರಂಡಿ ರಿಪೇರಿ ಮಾಡುವಂತೆ ರಾಜಶೇಖರ್ ಶೆಟ್ಟಿ ಒತ್ತಾಯಿಸಿದರು. ಸರಕಾರಿ ಶಾಲೆಗಳಲ್ಲಿ ನೀರಿನ ಗುಣಮಟ್ಟ ಮತ್ತು ಶಾಲಾ ಕೊಠಡಿ ಸುರಕ್ಷಿತ ವಾಗಿದೆಯಾ ಎಂದು ಶಿಕ್ಷಣ ಇಲಾಖೆಗೆ ರಿಚರ್ಡ್ ರೋಡ್ರಿಗಸ್ ಪ್ರಶ್ನೆನಿಸಿದರು.
ಪುಂಜಾಲಕಟ್ಟೆ ಕೆ. ಪಿ ಎಸ್ ಸಿ ಶಾಲೆಯ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುವುದಿಲ್ಲ ಮತ್ತು ಶಾಲೆಗೆ ಹೋಗುವ ರಸ್ತೆ ವಿಸ್ತರಣೆ ಮಾಡಿಸಬೇಕು ಎಂದು ಮಕ್ಕಳ ಪೋಷಕರು ಸಭೆಯಲ್ಲಿ ತಿಳಿಸಿದರು.ಹಲವು ವರ್ಷಗಳಿಂದ ದೂರು ನೀಡಿದರು ಅಪಾಯಕಾರಿ ಮರ ತೆರವುಗೊಳಿಸದಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು.









