






ಬೆಳ್ತಂಗಡಿ: ರಾಜ ಕೇಸರಿ ಸೇವಾ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ರಾಜ ಕೇಸರಿ ಸೇವಾ ಟ್ರಸ್ಟ್ ಕರ್ನಾಟಕ ಇದರ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 588 ನೇ ಸೇವಾ ಯೋಜನೆ 3 ನೇ ವರ್ಷದ ಆಟಿದ ಕಷಾಯ ಮತ್ತು ಮೆತ್ತೆಗಂಜಿ ವಿತರಣಾ ಕಾರ್ಯಕ್ರಮ ಆ.12 ರಂದು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆಯಿತು.
ಬೆಳ್ತಂಗಡಿ ರಾಜಕೇಸರಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಜಗದೀಶ್ ಲಾಯಿಲ ಅಧ್ಯಕ್ಷತೆ ವಹಿಸಿದ್ದರು.ರಾಜ ಕೇಸರಿ ಸೇವಾ ಟ್ರಸ್ಟ್ ನ ಜಿಲ್ಲಾಧ್ಯಕ್ಷ ಸಂತೋಷ್ ಕೂಲ್ಯ ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಅವರು ನನಗೆ ಬಹಳ ಖುಷಿಯಾಗಿದೆ ಇಂತಹ ಸಂಘಟನೆಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಇದು ನನಗೆ ಹೆಮ್ಮೆಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳ್ತಂಗಡಿ ತಹಶೀಲ್ದಾರ್ ಎಸ್ ಎನ್ ನರಗುಂದ ಮಾತನಾಡಿ ನಾನೀಗ ಪ್ರಥಮ ಬಾರಿಗೆ ಕುಡಿಯುತ್ತಾ ಇದ್ದೇನೆ ಬಹಳ ಕಹಿಯಾಗಿದೆ ಅದು ಇದು ಆರೋಗ್ಯಕ್ಕೆ ಒಳ್ಳೆದು ಎಂದು ಶ್ಲಾಘಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಅಧ್ಯಕ್ಷ ತುಕಾರಾಮ್ ಬಿ, ವಿಜಯವಾಣಿ ವರದಿಗಾರ ಮನೋಹರ್ ಬಳಂಜ, ವೈಭವ್ ಹಾರ್ಡ್ ವೇರ್ ಮಾಲಿಕ ಸೀತಾರಾಮ್ ಶೆಟ್ಟಿ ಉಪಸ್ಥಿತರದಿದ್ದು ಸಾವಿರಾರು ಮಂದಿ ಈ ಕಾರ್ಯಕ್ರಮದ ಸದಪಯೋಗ ಪಡಿಸಿಕೊಂಡರು.
ಖಾಸಗಿ ಬಸ್ ನೌಕರರು, ಬಸ್ ಸಿಬ್ಬಂದಿಗಳು ರಿಕ್ಷಾ ಚಾಲಕರು ತುಂಬಾ ಜನ ಖುಷಿ ವ್ಯಕ್ತಪಡಿಸಿದರು. ಸಾರ್ವಜನಿಕರು ಇಂತ ಸೇವೆ ಇನ್ನಷ್ಟು ಯಶಸ್ವಿಯಾಗಿ ಶುಭ ಹಾರೈಸಿದರು.
ರಾಜ ಕೇಸರಿ ಸೇವಾ ಟ್ರಸ್ಟಿನಲೋಕೇಶ್ ಮಂಗಳಾದೇವಿ, ಸಂದೀಪ್ ಸಾಲ್ಯಾನ್,ವರುಣ್ ಕುಮಾರ್ ಬಪ್ಪನಾಡು, ಶರತ್ ಕುಮಾರ್,ಮನೋಜ್ ಬೆಂಜನಪದವು,ಸತೀಶ್ ವಾಮಂಜೂರು,ಪ್ರಸಾದ್ ಕುಲಾಲ್ , ಗೌತಮ್ ಪೂಜಾರಿ, ವಿನೋದ್ ಲಾಯಿಲ,ಸಂದೀಪ್ ಬೆಳ್ತಂಗಡಿ,ಶರತ್ ಕೆಎಸ್, ಸಂದೇಶ್, ಶರತ್ ಕರಾಯ, ಪ್ರವೀಣ್ ಆಚಾರ್ಯ, ಸಂತೋಷ್ ಲಾಯಿಲ, ಪುನೀತ್ ಲಾಯಿಲ, ಪ್ರಶಾಂತ್ ಗುರುವಾಯನಕೆರೆ, ದೇವರಾಜ್ ಪೂಜಾರಿ, ಕಿಶನ್ ಚಂದ್ರ, ಜಯಂತ್, ಅಕ್ಷತ್, ವಸಂತ್, ಗಣೇಶ್, ಸತೀಶ್ ಕಂಗಿತ್ತಲ್, ನಿತೇಶ್, ಪ್ರಜ್ವಲ್ ಉಪಸ್ಥಿತರಿದ್ದರುರಾಜ ಕೇಸರಿ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ದೀಪಕ್ ಜಿಸ್ವಾಗತಿಸಿ, ವಂದಿಸಿದರು









