









ಬೆಳ್ತಂಗಡಿ: ‘ಕರಾವಳಿ ಕರ್ನಾಟಕ ಟಿವಿ’ ವತಿಯಿಂದ ಇತ್ತೀಚೆಗೆ ನಡೆದ ಪ್ರತಿಷ್ಠಿತ ‘ಲೀಡರ್ಸ್ ಅವಾರ್ಡ್ 2025’ ಸಮಾರಂಭದಲ್ಲಿ ಕರಾವಳಿ ಮತ್ತು ಮಧ್ಯ ಕರ್ನಾಟಕ ವಿಭಾಗದ ‘ಬೆಸ್ಟ್ ಎಂ.ಎಲ್.ಎ’ ಪ್ರಶಸ್ತಿಗೆ ಭಾಜನರಾಗಿರುವ, ತಾಲೂಕಿನ ಜನಮೆಚ್ಚಿದ ನಾಯಕ ಹಾಗೂ ಹೆಮ್ಮೆಯ ಶಾಸಕ ಹರೀಶ್ ಪೂಂಜ ಅವರನ್ನು ನಂದಿಬೆಟ್ಟ ಗರ್ಡಾಡಿಯ ಶ್ರೀ ನಂದಿಕೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಆ. 11 ರಂದು ಗೌರವಿಸಿ, ಅಭಿನಂದನೆಗಳನ್ನು ಸಲ್ಲಿಸಲಾಯಿತು.









