ಮೇಲಂತಬೆಟ್ಟು ಬದಿನಡೆ ನಾಗಬ್ರಹ್ಮ ದೇವಸ್ಥಾನದಲ್ಲಿ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ, ಗರ್ಭಗುಡಿಯಲ್ಲಿ ನಾಗದೇವರ ಪ್ರತ್ಯಕ್ಷ.

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕಿನ ಮೆಲಂತಬೆಟ್ಟಿನ “ಕೀರ್ತಿ” ಪ್ರಬುದ್ಧ ಜ್ಞಾನವಿಕಾಸ ಕೇಂದ್ರದ ವತಿಯಿಂದ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ಅವರ ಮಾರ್ಗದರ್ಶನದೊಂದಿಗೆ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮವನ್ನು ಬದಿನಡೆ ನಾಗಬ್ರಹ್ಮ ದೇವಸ್ಥಾನದ ಪೂರ್ಣ ಆವರಣವನ್ನು ಸ್ವಚ್ಛಗೊಳಿಸುವ ಮೂಲಕವಾಗಿ ನಡೆಸಲಾಯಿತು.

ನಾಗಬ್ರಹ್ಮ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಾರಾಯಣ ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೈಲೇಶ್ ಕುರ್ತೋಡಿ, ಮೇಲ್ವಿಚಾರಕ ರಾಮ್ ಕುಮಾರ್, ಸೇವಾಪ್ರತಿನಿಧಿ ಲೀಲಾವತಿ,ಸದಸ್ಯ ನಿತಾ, ಅಶ್ವಿನಿ, ನಳಿನಿ, ವಿಜಯ, ಅಪ್ಪಿ, ಸುಶೀಲ, ವಿಧ್ಯಾ, ಶಶಿಕಲಾ, ಸೀತಾ ಹಾಗು ಜ್ಞಾನವಿಕಾಸ ಕೇಂದ್ರದ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.

ನಾಗದೇವರ ಪ್ರತ್ಯಕ್ಷ ನಾಗಬ್ರಹ್ಮ ದೇವಸ್ಥಾನದ ಗರ್ಭಗುಡಿಯ ಒಳಭಾಗದಲ್ಲಿರುವ ಹುತ್ತದಿಂದ ಹೊರಬಂದ ನಾಗದೇವರು ಸ್ವಚ್ಛತಾ ಕಾರ್ಯದಲ್ಲಿ ಉಪಸ್ಥಿತರಿದ್ದ ಸದಸ್ಯರಿಗೆ ಪ್ರತ್ಯಕ್ಷ ದರ್ಶನ ನೀಡಿದ್ದು ಸೇವೆ ನೀಡಿದ ಸದಸ್ಯರಿಗೆ ಈ ಜನ್ಮದ ಪುಣ್ಯ ಎಂಬಂತಾಯಿತು.

LEAVE A REPLY

Please enter your comment!
Please enter your name here