ಮದ್ದಡ್ಕ: ವಿಜೃಂಭಣೆಯಿಂದ ಜರುಗಲಿದೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವ; ಆಮಂತ್ರಣ ಪತ್ರಿಕೆ ಬಿಡುಗಡೆ

0

​ಕುವೆಟ್ಟು: ಶ್ರೀರಾಮ ಸೇವಾ ಸಮಿತಿ ಮದ್ದಡ್ಕ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಜರುಗಲಿರುವ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಸ್ಥಳೀಯ ಶ್ರೀರಾಮ ಭಜನಾ ಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು.​

ಮದ್ದಡ್ಕದಲ್ಲಿ ಮುಂಬರುವ ಸೆಪ್ಟೆಂಬರ್ 4 ರಂದು ನಡೆಯಲಿರುವ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಯಶಸ್ಸಿಗಾಗಿ ಈಗಿನಿಂದಲೇ ಸಿದ್ಧತೆಗಳು ಭರಾಟೆಯಿಂದ ಸಾಗುತ್ತಿವೆ.​ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಶ್ರೀರಾಮ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದು ಶುಭ ಹಾರೈಸಿದರು.​

ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷ ಮನೋಹರ ಕೇದಳಿಕೆ, ಪ್ರಧಾನ ಕಾರ್ಯದರ್ಶಿ ಪ್ರೀತಮ್ ಆಚಾರ್ಯ, ಕೋಶಾಧಿಕಾರಿ ಪವನ್ ಪೂಜಾರಿ ಪಯ್ಯೋಟ್ಟು, ವಿಶ್ವ ಹಿಂದೂ ಪರಿಷತ್ ಮದ್ದಡ್ಕ ಇದರ ಅಧ್ಯಕ್ಷ ಗಣೇಶ್ ಶೆಟ್ಟಿ ಅರ್ಕಜೆ, ಕಾರ್ಯದರ್ಶಿ ವಿನೋದ್ ಶೆಣೈ ಮದ್ದಡ್ಕ, ಭಜರoಗದಳ ಮದ್ದಡ್ಕ ಸoಚಾಲಕ ಯಶೋಧರ ಶೆಟ್ಟಿ ಅರ್ಕಜೆ, ಮದ್ದಡ್ಕ ತಾಯಿ ರಕ್ತೇಶ್ವರಿ ಮತ್ತು ಪಿಲಿಚಾಮುಂಡಿ ದೈವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಹಾಗೂ ಭಜನಾ ಮoದಿರದ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here