






ಮೀಯಾರು ಪುದುವೆಟ್ಟು ಶ್ರೀ ವನದುರ್ಗಪರಮೇಶ್ವರಿ ದೇವಸ್ಥಾನಕ್ಕೆ ಉಜಿರೆಯ ಕಿರಣ್ ಆಗ್ರೋ ಟೆಕ್ ಮಾಲೀಕ ಪ್ರಕಾಶ್ ಹೆಬ್ಬಾರ್ ರವರು 26,000 ರೂ. ಮೌಲ್ಯದ ಪಾಚಿ ತೆಗೆಯುವ ಯಂತ್ರವನ್ನು ಕೊಡುಗೆಯ ರೂಪದಲ್ಲಿ ಆ. 10 ರಂದು ನೀಡಿದರು .



ಈ ಸತ್ಕಾರ್ಯಕ್ಕಾಗಿ ದೇವಸ್ಥಾನದ ವತಿಯಿಂದ ಅವರಿಗೆ ಗೌರವಾರ್ಪಣೆ ಮಾಡಲಾಯಿತು.
ದೇವಸ್ಥಾನದ ಅರ್ಚಕ ಕಿರಣ್ ಮಸ್ಕಾರ್, ಗೌರವ ಅಧ್ಯಕ್ಷ ರಮೇಶ್ ಪ್ರಭು ಉಜಿರೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೊಮ್ಮಣ್ಣಗೌಡ ಮಠ, ಕಾರ್ಯದರ್ಶಿ ಸಂತೋಷ್ ಕೆ.ಸಿ., ಉಪಾಧ್ಯಕ್ಷ ಜನಾರ್ಧನ್ ಪೂಜಾರಿ , ಉಪ ಕಾರ್ಯದರ್ಶಿ ಶುಭನಿತ, ಕೋಶಾಧಿಕಾರಿ ಶಾಜು ಕೆ.ಆರ್., ಹಾಗೂ ಸಮಿತಿ ಸದಸ್ಯರಾದ ಸೋಮನಾಥ ಗೌಡ, ನಾರಾಯಣ ನಾಯ್ಕ, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಮೋಹಿನಿ ಧರ್ಮರಾಜ, ಸಮಿತಿ ಸದಸ್ಯರಾದ ಸರೋಜಾ ಕರ್ಪಾಜೆ, ಸರಸ್ವತಿ ಪೆಲತಾಜೆ, ಸಂಚಾಲಕ ಬಾಲಕೃಷ್ಣ ಗೌಡ ಅಂಗಡಿ ಮನೆ ಹಾಗೂ ಊರಿನ ಸಮಸ್ತ ಭಕ್ತಾದಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.









