ಬೆಳ್ತಂಗಡಿ: ಕರಾವಳಿಯ ಶ್ರೇಷ್ಠ ಶಾಸಕ ಗೌರವ ಪಡೆದ ಹರೀಶ್ ಪೂಂಜಾಗೆ ಬಳಂಜ ಗ್ರಾಮಸ್ಥರಿಂದ ಅಭಿನಂದನೆ

0

*ಬೆಳ್ತಂಗಡಿ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರೂ, ಬೆಳ್ತಂಗಡಿ ಕ್ಷೇತ್ರದ ಜನಪ್ರಿಯ ಶಾಸಕರೂ ಆದ ಹರೀಶ್ ಪೂಂಜಾ ಅವರಿಗೆ ‘ಕರ್ನಾಟಕ ಟಿವಿ’ ಜನಮತದ ಆಧಾರದಲ್ಲಿ ‘ಕರಾವಳಿಯ ಶ್ರೇಷ್ಠ ಶಾಸಕ’ ಗೌರವ ಲಭಿಸಿದೆ.

ಈ ಹಿನ್ನೆಲೆಯಲ್ಲಿ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಭಕ್ತರು ಹಾಗೂ ಬಳಂಜ, ನಾಲ್ಕೂರು, ತೆಂಕಕಾರಂದೂರು ಗ್ರಾಮಸ್ಥರ ವತಿಯಿಂದ ಶಾಸಕರ ಗೃಹ ಕಚೇರಿ ‘ಮಿಥಿಲ’ದಲ್ಲಿ ಭಾನುವಾರ (ಆಗಸ್ಟ್ 09, 2026) ಸನ್ಮಾನಿಸಿ ಅಭಿನಂದಿಸಲಾಯಿತು.

“ಬಳಂಜ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸುಂದರ ಕ್ಷಣಗಳು ಎಂದಿಗೂ ಸ್ಮರಣೀಯ. ದೇವಳದ ಹಾಗೂ ಬಳಂಜ ಗ್ರಾಮದ ಸಮಗ್ರ ಅಭಿವೃದ್ಧಿಗೆ ನಾನು ಸದಾ ಬದ್ಧನಾಗಿದ್ದು, ಜನರ ಜೊತೆಯಾಗಿ ನಿಲ್ಲುತ್ತೇನೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.

​ಈ ಅಭಿನಂದನಾ ಸಮಾರಂಭದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶೀತಲ್ ಪಡಿವಾಳ್ (ಬಳಂಜ ಗುತ್ತು), ಚಂದ್ರಶೇಖರ್ ಪಿ.ಕೆ., ಕುಳೆಂಜಿರೋಡಿ ಗುತ್ತುವಿನ ಅರುಣ ಹೆಗ್ಗಡೆ, ಸತೀಶ್ ರೈ ಬಾರ್ದಡ್ಕ, ಸುರೇಶ ಶೆಟ್ಟಿ ಕುರೆಲ್ಯ, ದಿನೇಶ್ ಪಿ.ಕೆ., ದೇಜಪ್ಪ ಪೂಜಾರಿ, ಪ್ರಭಾಕರ್ ಹೆಗ್ಡೆ ಕೊಡಿ, ಗುರುಪ್ರಸಾದ್ ಹೆಗ್ಡೆ, ಸುರೇಶ ಹೇವ ಸೇರಿದಂತೆ ದೇವಳದ ಪ್ರಮುಖರು ಹಾಗೂ ಗ್ರಾಮದ ಹತ್ತಾರು ಗಣ್ಯರು ಉಪಸ್ಥಿತರಿದ್ದರು.​ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಪರವಾಗಿ ಚಂದ್ರಶೇಖರ್ ಪಿ.ಕೆ. ಅವರು ಶಾಸಕರ ಸಾಧನೆಯನ್ನು ಕೊಂಡಾಡಿ ಅಭಿನಂದನಾ ನುಡಿಗಳನ್ನಾಡಿದರು.

LEAVE A REPLY

Please enter your comment!
Please enter your name here