ಮೇಲಂತಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾ ಸಭೆ

0

ಮೇಲಂತಬೆಟ್ಟು : ಮೇಲಂತಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ಸರ್ವಸದಸ್ಯರವಾರ್ಷಿಕ ಸಾಮಾನ್ಯ ಸಭೆಯು ಆ. 7 ರಂದುಸಮುದಾಯ ಭವನ ಮೇಲಂತಬೆಟ್ಟುನಲ್ಲಿ ಸಂಘದ ಅಧ್ಯಕ್ಷ ಜಾನ್ ಪಿಂಟೋ ರವರ ಅದ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಮಾತನಾಡಿ ಸಂಘವು ರೂ.4,97,391/- ಲಾಭ ಗಳಿಸಿ ಸದಸ್ಯರಿಗೆ 14% ಡಿವಿಡೆಂಡ್, 65%ಬೋನಸ್ ಘೋಷಿಸಿದರು. ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಪ್ರಥಮ ಪ್ರಮೀಳಾ ದಿನೇಶ್, ದ್ವಿತೀಯ ಜಾನ್ ಪಿಂಟೋತೃತೀಯ ಸರಸ್ವತಿ ಇವರನ್ನು ಸ್ಮರಣಿಕೆ ನೀಡಲಾಯಿತು.

ಸಭೆಯಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಎಸ್ ಎಸ್ ಎಲ್ ಸಿಯಲ್ಲಿ ರಿಯೋಣ ಮೋನಿಸ್, ಸುಜಿತ್, ವಿಶುರ್ತ್, ರಕ್ಷಾ, ಪಿ ಯು ಸಿಯಲ್ಲಿ ಭುವಿ ಅಂಚನ್ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.

ದ.ಕ. ಹಾಲು ಒಕ್ಕೂಟ ಉಪ ವ್ಯವಸ್ಥಾಪಕ ಡಾ.ಡಿ.ಆರ್. ಸತೀಶ್ ರಾವ್,ವಿಸ್ತರಣಾಧಿಕಾರಿ ದ.ಕ. ಹಾಲು ಒಕ್ಕೂಟ ರಾಜೇಶ್ ಪಿ. ಕಾಮತ್, ಉಪಾಧ್ಯಕ್ಷಕ್ಷೆ ನಳಿನಾಕ್ಷಿ ಎನ್.,ನಿರ್ದೇಶಕರು ಧರ್ಣಪ್ಪ ಬಂಗೇರ, ಚಂದ್ರರಾಜ್ ಯಂ. ಗೀತಾ ಎಸ್. ಶೆಟ್ಟಿ, ರಾಜೇಶ್ ಮೋನಿಸ್, ಸರಸ್ವತಿ ಡಿ., ಮೋಹನ ಸಪಲ್ಯ, ವಾಸು ಕೆ., ಪ್ರಶಾಂತ ನಾಯ್ಕ, ಭೋಜ ಪೂಜಾರಿ, ಇಜಿದೋರ್ ರೊಡ್ರಿಗಸ್, ಉಷಾ ವಿ., ರಾಜೇಶ್ ಪಿ.ಉಪಸ್ಥಿತರಿದ್ದರು.

ಸಿಬ್ಬಂದಿಗಳಾದ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು,ಹಾಲು ಪರೀಕ್ಷಕ ಸೀತಾ, ಬಿ.ಎಂ.ಸಿ. ಸಹಾಯಕರು ಚೇತನ್,ಆಂತರಿಕ ಲೆಕ್ಕ ಪರಿಶೋಧಕ ವಿನ್ಸೆಂಟ್ ರೊಡ್ರಿಗಸ್ ಸಹಕರಿಸಿದರು.ಓಡಿಯೂರು ಸಹಕಾರಿ ಸಂಘದಿಂದ ಮಾಹಿತಿ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here