ಅಳದಂಗಡಿ: ಮಳೆಯಾರ್ಭಟಕ್ಕೆ ಕಡಿತಗೊಂಡ ಪ್ರಮುಖ ಸಂಪರ್ಕ ರಸ್ತೆ; ಪರದಾಡುತ್ತಿರುವ ಗ್ರಾಮಸ್ಥರು

0

​ಅಳದಂಗಡಿ: ಸುಲ್ಕೇರಿಮೊಗ್ರು ಗ್ರಾಮದ ವರ್ಪಾಳೆ, ಪಂಜಾಲಗುಡ್ಡೆ ಹಾಗೂ ಪೋರಿಜ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಯು ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂಪೂರ್ಣವಾಗಿ ಕಡಿತಗೊಂಡಿದೆ.​

ಭಾರೀ ಮಳೆಯ ಪರಿಣಾಮ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ರಸ್ತೆಯ ಮೇಲೆಯೇ ನೀರು ಹರಿಯುತ್ತಿರುವುದರಿಂದ ಸಂಚಾರ ಸಂಪೂರ್ಣ ಬಂದ್ ಆಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ಅಪಾಯದ ಮುನ್ಸೂಚನೆಯಾಗಿ ಈ ಮಾರ್ಗದಲ್ಲಿ ಯಾವುದೇ ಘನ ವಾಹನಗಳಾಗಲಿ, ಇತರೆ ವಾಹನಗಳಾಗಲಿ ಸಂಚರಿಸದಂತೆ ನಿರ್ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here