






ಬೆಳ್ತಂಗಡಿ: ತಾಲೂಕಿನ ಪ್ರಸಿದ್ಧ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆವರಣದ ತಡೆಗೋಡೆ ಇಂದು ಬೆಳಿಗ್ಗೆ ಸುರಿದ ಭಾರಿ ಮಳೆಗೆ ಕುಸಿದು ಬಿದ್ದಿದೆ. ಕೆಲವು ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಣ್ಣು ಸಡಿಲವಾಗಿ ದೇವಸ್ಥಾನದ ಚಾರ್ಚ್ ಸಮೀಪದ ತಡೆಗೋಡೆ ನೆಲಕ್ಕುರುಳಿದೆ.




ಕುಸಿದ ತಡೆಗೋಡೆಗೆ ಹೊಂದಿಕೊಂಡೇ ವಿದ್ಯುತ್ ಕಂಬ ಇತ್ತು. ತಡೆಗೋಡೆ ಕಂಬದ ಮೇಲೆ ಬಿದ್ದು ಹಾನಿ ಉಂಟಾಗಿದೆ. ವಿಷಯ ತಿಳಿದ ತಕ್ಷಣ ದೇವಸ್ಥಾನದ ಆಡಳಿತ ಮಂಡಳಿ, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿದರು.

ದೇವಸ್ಥಾನದ ಆವರಣಕ್ಕೆ ಮತ್ತಷ್ಟು ಹಾನಿಯಾಗದಂತೆ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ನಾವೂರು ಗೋಪಾಲಕೃಷ್ಣ ದೇವಸ್ಥಾನವು ಈ ಭಾಗದ ಭಕ್ತರ ಪ್ರಮುಖ ಆರಾಧನಾ ಕೇಂದ್ರವಾಗಿದೆ. ಮಳೆ ಮುಂದುವರಿದರೆ ದೇವಸ್ಥಾನದ ಇತರೆ ಕಟ್ಟಡಗಳಿಗೂ ಹಾನಿಯಾಗಬಹುದೆಂಬ ಆತಂಕ ಭಕ್ತರಲ್ಲಿ ಮನೆಮಾಡಿದೆ.









