ಬೆಳಾಲು 45ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಆಚಾರ್ಯ

0

ಬೆಳಾಲು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಬೆಳಾಲು ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರ ದೊಂದಿಗೆ ನಡೆಯುತ್ತಿರುವ 45 ನೇ ವರ್ಷದ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಹಾಲಿ ಕಾರ್ಯದರ್ಶಿ ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಆಚಾರ್ಯ ಕುದ್ರಾಲು ಆಯ್ಕೆಯಾದರು.

ಕಾರ್ಯದರ್ಶಿಯಾಗಿ ಶಶಿಧರ ಗೊಲ್ಲ ಕೆ., ಬೆಳಾಲು, ಕೋಶಾಧಿಕಾರಿಯಾಗಿ ಶಶಿಧರ ಓಡಿಪ್ರೊಟ್ಟು, ಗೌರವಾಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ,ಪ್ರಧಾನ ಸಂಚಾಲಕರಾಗಿ ಶಿವಕುಮಾರ್ ಬಾರಿತ್ತಾಯ ಪಾರಳ, ಸಂಚಾಲಕರಾಗಿ ಸತೀಶ್ ಗೌಡ ಎಳ್ಳುಗದ್ದೆ, ಉಪಾಧ್ಯಕ್ಷರುಗಳಾಗಿ ಬೆಳಾಲು ಒಕ್ಕೂಟದ ಅಧ್ಯಕ್ಷ ರತ್ನಾಕರ ಆಚಾರ್ಯ ಶಾಂತಿನಗರ ಮಾಯ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯಾನ್ ಎಂಜಿರಿಗೆ, ಕೊಲ್ಪಾಡಿ ಒಕ್ಕೂಟದ ಅಧ್ಯಕ್ಷೆ ನೀಲಾವತಿ, ಜತೆಕಾರ್ಯದರ್ಶಿಗಳಾಗಿ ಸೇವಾಪ್ರತಿನಿಧಿಗಳಾದ ತಾರಾನಾಥ ಬೆಳಾಲು , ಪ್ರಭಾವತಿ ಮಾಯ, ರೇಷ್ಮಾ ಕೊಲ್ಪಾಡಿ ಇವರನ್ನು ಆಯ್ಕೆ ಮಾಡಲಾಯಿತು.

ಹಾಗೂ ಗೌರವ ಸಲಹೆಗಾರರಾಗಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಮತ್ತು ಊರಿನ ಗಣ್ಯರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here