







ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲವಾರು ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದ ಇಬ್ಬರು ಶುಶ್ರೂಷಾಧಿಕಾರಿಗಳಾದ ಭೇಷ್ ಕುಮಾರಿ ಹಾಗೂ ಸುಜಾತಾ ಎಂಬವರು ಪದೋನ್ನತಿ ಹೊಂದಿ ತಾಲೂಕು ಆಸ್ಪತ್ರೆಯಿಂದ ವರ್ಗಾವಣೆಗೊಂಡು ಬೀಳ್ಕೊಡುಗೆ ಸಮಾರಂಭ ಆಸ್ಪತ್ರೆಯ ಸಭಾಂಗಣದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್ ರವರ ಅಧ್ಯಕ್ಷತೆಯಲ್ಲಿ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.


ಸಭೆಯಲ್ಲಿ ಇತರ ವೈದ್ಯಾಧಿಕಾರಿಗಳಾದ ಡಾ.ತಾರಕೇಶ್ವರಿ ಡಾ.ರಶ್ಮಿ, ಡಾ.ದೀಕ್ಷಿತಾ, ಡಾ.ಶಶಾಂಕ್, ಡಾ.ಹೇಮಲತಾ, ಡಾ.ವೆಂಕಟ ಸ್ವಾಮಿ, ಡಾ.ರಾಘವೇಂದ್ರ, ಡಾ.ಮನೀಷ, ಡಾ.ಸ್ವಸ್ತಿಕ್ ಹಾಗೂ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜ್ಯೋತಿ ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮದ ಸಂಯೋಜನೆಯನ್ನು ಡಾ.ತಾರಕೇಶ್ವರಿ ನೆರವೇರಿಸಿದರು.









