







ಬೆಳ್ತಂಗಡಿ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯನ್ನು ಅಪ್ಡೇಟ್ ಮಾಡಬೇಕೆಂಬುದು ಸರ್ಕಾರದ ಯೋಜನೆಯಾಗಿತ್ತು. ಆದರೆ ಪ್ರಸ್ತುತ ಮತ್ತೊಂದು ಗ್ಯಾರಂಟಿ ಯೋಜನೆಯಾಗಿರುವ ಗೃಹ ಜ್ಯೋತಿಗೆ ಮರು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮೆಸ್ಕಾಂ ಮುಖಾಂತರ ಚಾಲ್ತಿಯಲ್ಲಿದೆ.
ಹಾಗಾಗಿ ಗೃಹಲಕ್ಷ್ಮಿ ಯೋಜನೆಗೆ ಮರು ಅರ್ಜಿ ಸಲ್ಲಿಕೆ ಹಾಗೂ ಕೆವೈಸಿ ಇನ್ನೂ ಆರಂಭವಾಗಿಲ್ಲ. ಆದರೂ ಕೆಲವೊಂದು ಯೂಟ್ಯೂಬರ್ಸ್ ಗೃಹಲಕ್ಷಿ ಯೋಜನೆಗೆ ಮರು ಅರ್ಜಿ ಸಲ್ಲಿಸಬೇಕು ಮತ್ತು ಕೆವೈಸಿ ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವುದರಿಂದ ಫಲಾನುಭವಿಗಳಲ್ಲಿ ಗೊಂದಲ ಉಂಟಾಗಿದೆ.


ಈ ಸುಳ್ಳು ಮಾಹಿತಿಯಿಂದಾಗಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಗೆ ಜನರು ಬಂದು ಕಾಯುವಂತಾಗಿದೆ.ಇಂತಹ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸರ್ಕಾರ ಕಠಿಣ ಶಿಕ್ಷೆಯನ್ನು ವಿಧಿಸಬೇಕಾಗಿದೆ ಎಂದು ನೊಂದ ಗ್ರಾಹಕರು ಒತ್ತಾಯಿಸಿದ್ದಾರೆ. ಈಗ ಹೆಚ್ಚಿನ ಜನರು ಹಲವಾರು ಮಾಹಿತಿಯನ್ನು ನೋಡಬೇಕಾದರೆ ಯೂಟ್ಯೂಬ್ ಮೊರೆ ಹೋಗುತ್ತಾರೆ. ಆದರೆ ಇದೀಗ ಕೆಲವೊಂದು ಸರ್ಕಾರಿ ಯೋಜನೆಗಳ ಕುರಿತು ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಪ್ರಸ್ತುತ ಹೊಸ ರೇಷನ್ ಗೆ ಯಾವುದೇ ಅರ್ಜಿ ಸಲ್ಲಿಕೆ ಆರಂಭವಾಗಿಲ್ಲ.
ಹಾಗಾಗಿ ಯಾರೂ ಗೊಂದಲಕ್ಕೆ ಒಳಗಾಗಬೇಕಿಲ್ಲ.ಯೋಜನೆ ಅರ್ಜಿ ಹಾಗೂ ಕೆವೈಸಿ ಪ್ರಾರಂಭದಲ್ಲಿ ಮಾಹಿತಿಯನ್ನು ಪ್ರಕಟಿಸಿಲಾಗುದು ಎಂದು ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ









