ಹತ್ಯಡ್ಕ ಆಡಳಿತಾಧಿಕಾರಿ ವಿಜೇತ್ ಬಡಗಕಾರಂದೂರುಗೆ ವರ್ಗಾವಣೆ

0

ಬೆಳ್ತಂಗಡಿ: ಕಳೆದ ಒಂದು ವರ್ಷದಿಂದ ಹತ್ಯಡ್ಕ ಗ್ರಾಮದಲ್ಲಿ ಆಡಳಿತಾಧಿಕಾರಿಯಾಗಿದ್ದ ವಿಜೇತ್ ಬಿ. ಅವರು ಬೆಳ್ತಂಗಡಿ ತಾಲೂಕಿನ ಬಡಗಕಾರಂದೂರು ಗ್ರಾಮಕ್ಕೆ ಆಡಳಿತಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.

ಇವರು ಈ ಮೊದಲು ಧರ್ಮಸ್ಥಳ ಗ್ರಾಮದಲ್ಲಿ ಎರಡು ವರ್ಷ, ಕಡಬದಲ್ಲಿ ನಾಲ್ಕು ವರ್ಷ, ಬಡಗಕಾರಂದೂರು ಮತ್ತು ಶಿರ್ಲಾಲು ಗ್ರಾಮದಲ್ಲಿ ಏಳು ವರ್ಷ, ಲಾಯಿಲ, ರೆಖ್ಯ, ಶಿಶಿಲ, ಶಿಬಾಜೆ ಗ್ರಾಮದಲ್ಲಿ ಒಂದು ವರ್ಷ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಮೂಲತಃ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದವರು.

LEAVE A REPLY

Please enter your comment!
Please enter your name here