







ಧರ್ಮಸ್ಥಳ : ಧರ್ಮಸ್ಥಳ ಶ್ರೀ ಧ ಮ. ಆಂಗ್ಲ ಮಾಧ್ಯಮ ಶಾಲಾಯಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ದಕ್ಷಿಣ ಕನ್ನಡ ಇವರು ನಡೆಸಿದ ತೃತೀಯ ಚರಣ ಕಬ್ ವಿಭಾಗದ 36 ವಿದ್ಯಾರ್ಥಿಗಳು, ಹಾಗೂ ಬುಲ್ ಬುಲ್ ವಿಭಾಗದ ಸುವರ್ಣ ಗರಿ ಪರೀಕ್ಷೆಯಲ್ಲಿ 37 ವಿದ್ಯಾರ್ಥಿಗಳು ತೆರ್ಗಡೆಗೊಂಡಿದ್ದು, ಇವರಿಗೆ ಜಿಲ್ಲಾ ಸಂಸ್ಥೆಯಿಂದ ಕೊಡ ಮಾಡಲಾದ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು.


ಕಬ್ ವಿಭಾಗದಲ್ಲಿ 25 ವಿದ್ಯಾರ್ಥಿಗಳು ಮುಂದಿನ ಹಂತದ ಚತುರ್ಥ ಚರಣ ಹಾಗೂ ಬುಲ್ ಬುಲ್ ವಿಭಾಗದಲ್ಲಿ 21 ವಿದ್ಯಾರ್ಥಿಗಳು ಮುಂದಿನ ಹಂತದ ಹೀರಕ್ ಗರಿ ಪರೀಕ್ಷೆಗೆ ಆಯ್ಕೆಗೊಂಡಿರುತ್ತಾರೆ. ಶಾಲಾ ಮುಖ್ಯ ಶಿಕ್ಷಕಿ ಪರಿಮಳ ಎಂ.ವಿ. ಯವರ ,ಮಾರ್ಗದರ್ಶನದೊಂದಿಗೆ ಶಾಲಾ ಕಬ್ ಮಾಸ್ಟರ್ ಅಮೃತಾ ವಿ. ಶೆಟ್ಟಿ, ಹೇಮಾವತಿ ಜೈನ್, ಹಾಗೂ ಕಾದಂಬರಿ ಸಂದೀಪ್ ಹಾಗೂ ಫ್ಲಾಕ್ ಲೀಡರ್ ಗಳಾದ ಸೌಮ್ಯ ಎಂ. , ಪದ್ಮಶ್ರೀ, ದಿವ್ಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ.









