ಜುಲೈ 19: ಎಸ್‌ಎಸ್‌ಎಫ್ 14 ನೇ ಆವೃತ್ತಿಯ SSF ಬೆಳ್ತಂಗಡಿ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ

0

ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಿ, ಧಾರ್ಮಿಕ ಪ್ರಜ್ಞೆ, ಸಾಹಿತ್ಯಿಕ ಅಭಿರುಚಿ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ಎಸ್‌ಎಸ್‌ಎಫ್) ವರ್ಷಂಪ್ರತಿ ಯೂನಿಟ್, ಸೆಕ್ಟರ್, ಡಿವಿಷನ್, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಾಹಿತ್ಯೋತ್ಸವವನ್ನು ಆಯೋಜಿಸುತ್ತಾ ಬಂದಿದೆ.

ಭಾಷಣ, ಬರವಣಿಗೆ, ಗಾಯನ ಸೇರಿದಂತೆ ವಿವಿಧ ವಿಭಾಗಗಳಲ್ಲಿ 150ಕ್ಕೂ ಅಧಿಕ ಸ್ಪರ್ಧೆಗಳ ಮೂಲಕ ಸಾವಿರಾರು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಈ ಸಾಹಿತ್ಯೋತ್ಸವದ ಅಂಗವಾಗಿ ಎಸ್‌ಎಸ್‌ಎಫ್ ಬೆಳ್ತಂಗಡಿ ಡಿವಿಷನ್‌ನ 14ನೇ ಸಾಹಿತ್ಯೋತ್ಸವವು ಜುಲೈ 19 (ಭಾನುವಾರ)ರಂದು ಅಲ್ ಖಾದಿಸಾ ಕ್ಯಾಂಪಸ್, ಕಾವಳಕಟ್ಟೆಯಲ್ಲಿ ನಡೆಯಲಿದೆ.

ಈ ಸಾಹಿತ್ಯೋತ್ಸವದಲ್ಲಿ ಡಿವಿಷನ್ ವ್ಯಾಪ್ತಿಯ 58 ಯೂನಿಟ್‌ಗಳಿಂದ ಆಯ್ಕೆಯಾದ 7 ಸೆಕ್ಟರ್‌ಗಳ ಸುಮಾರು 900ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದು, 150ಕ್ಕೂ ಹೆಚ್ಚು ಸ್ಪರ್ಧೆಗಳು ವಿವಿಧ ವೇದಿಕೆಗಳಲ್ಲಿ ನಡೆಯಲಿವೆ. ಸಾಹಿತ್ಯ, ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವ ಈ ಉತ್ಸವವು ತಾಲೂಕಿನ ಪ್ರಮುಖ ವಿದ್ಯಾರ್ಥಿ ಸಮಾವೇಶವಾಗಲಿದೆ.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಫ್ ರಾಜ್ಯ ನಾಯಕರು, ಸಾಹಿತಿಗಳು, ಸಾಮಾಜಿಕ ಹಾಗೂ ಧಾರ್ಮಿಕ ಗಣ್ಯರು ಉಪಸ್ಥಿತರಿದ್ದು, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ವಿವಿಧ ಆಯಾಮಗಳಿಗೆ ಸಾಕ್ಷಿಯಾಗಲಿರುವ ಈ ಡಿವಿಷನ್ ಮಟ್ಟದ ಸಾಹಿತ್ಯೋತ್ಸವವು ತಾಲೂಕಿನ ವಿದ್ಯಾರ್ಥಿ ಪ್ರತಿಭೆಗಳ ಅನಾವರಣಕ್ಕೆ ಮಹತ್ವದ ವೇದಿಕೆಯಾಗಲಿದೆ ಎಂದು ಎಸ್‌ಎಸ್‌ಎಫ್ ಬೆಳ್ತಂಗಡಿ ಡಿವಿಷನ್ ಸಾಹಿತ್ಯೋತ್ಸವ ನಿರ್ವಹಣಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here