







ವೇಣೂರು: ಕ್ಯಾಂಪ್ಕೋ ಸಂಸ್ಥೆಯು ತನ್ನ ಸದಸ್ಯರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ‘ಕ್ಯಾಂಪ್ಕೋ ಸದಸ್ಯರ ಆರೋಗ್ಯ ದತ್ತ’ ಯೋಜನೆಯಡಿ, ವೇಣೂರು ಗ್ರಾಮದ ಸದಸ್ಯ ಜಿನೇಶ ಅವರಿಗೆ ವೈದ್ಯಕೀಯ ವೆಚ್ಚದ ಪರಿಹಾರವಾಗಿ ಮಂಜೂರಾದ ₹ 50,301/- ಮೊತ್ತದ ಚೆಕ್ಕನ್ನು ಜು. 17 ರಂದು ಹಸ್ತಾಂತರಿಸಲಾಯಿತು.
ವೇಣೂರಿನಲ್ಲಿರುವ ಫಲಾನುಭವಿಯ ಸ್ವಗೃಹದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ, ಕ್ಯಾಂಪ್ಕೋ ಸಂಸ್ಥೆಯ ಗೌರವಾನ್ವಿತ ನಿರ್ದೇಶಕ ದಯಾನಂದ ಹೆಗ್ಡೆಯವರು ಚೆಕ್ಕನ್ನು ಹಸ್ತಾಂತರಿಸಿ, ಸದಸ್ಯರ ಆರೋಗ್ಯದ ಬಗ್ಗೆ ವಿಚಾರಿಸಿದರು.


ಕ್ಯಾಂಪ್ಕೋ ಬೈಕಂಪಾಡಿ ಪ್ರಾಂತ್ಯದ ಪ್ರಾದೇಶಿಕ ವ್ಯವಸ್ಥಾಪಕರ
ನಿತಿನ್ ಕೋಟ್ಯಾನ್, ವೇಣೂರು ಶಾಖೆಯ ವ್ಯವಸ್ಥಾಪಕ ಅನಿಶ್ ರಾಜ್ ಯಂ, ಬೈಕಂಪಾಡಿ ಶಾಖೆಯ ಅಶೋಕ್ ಹಾಗೂ ಫಲಾನುಭವಿಯ ಕುಟುಂಬದವರು ಉಪಸ್ಥಿತರಿದ್ದರು.









