ಎಸ್.ಐ.ಆರ್. ಪ್ರಕ್ರಿಯೆ: ಬೆಳ್ತಂಗಡಿಯಲ್ಲಿ ಶೇ.99.35 ಪ್ರಗತಿರಾಜಕೀಯ ಪಕ್ಷದ ಪ್ರತಿನಿಧಿಗಳ ಸಭೆಯಲ್ಲಿ ಮತದಾರರ ನೋಂದಾಣಿಧಿಕಾರಿ ಹೊನ್ನಪ್ಪ ಮಾಹಿತಿ

0

ಬೆಳ್ತಂಗಡಿ: ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಐ.ಆರ್‌ಗೆ ಸಂಬಂಧಿಸಿದಂತೆ 2,30,575 ಮತದಾರರಲ್ಲಿ ಒಟ್ಟು 2,29,080 ಎನ್ಯುಮರೇಶನ್ ನಮೂನೆಗಳನ್ನು ಮತದಾರರಿಗೆ ಹಂಚಿಕೆ ಮಾಡಲಾಗಿದ್ದು ಶೇಕಡಾ 99.35 ಪ್ರಗತಿ ಸಾಧಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿಯಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಮಾಹಿತಿ ನೀಡಿದರು.

ಜು.14ರಂದು ತಾಲೂಕು ಕಚೇರಿಯಲ್ಲಿ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷದ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬೆಳ್ತಂಗಡಿ, ವೇಣೂರು ಮತ್ತು ಕೊಕ್ಕಡ ಹೋಬಳಿ ಮತಗಟ್ಟೆಯಲ್ಲಿ ಹಂಚಿಕೆಯಾದ ನಮೂನೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಮನೆಮನೆಗಳಿಗೆ ಭೇಟಿ ನೀಡಿ ಮತದಾರರಿಗೆ ಎನ್ಯುಮರೇಶನ್ ಫಾರಂಗಳ ಹಂಚಿಕೆ ನಡೆಯುತ್ತಿದ್ದು ಬಿ.ಎಲ್.ಓಗಳು ಮತ್ತು ಬಿ.ಎಲ್.ಎ ಏಜೆಂಟರುಗಳು ಕೂಡಿಕೊಂಡು ಮನೆ ಮನೆಗೆ ತೆರಳಿ ನಮೂನೆಗಳನ್ನು ಸರಿಯಾಗಿ ವಿತರಣೆ ಮಾಡಬೇಕು. ಈಗಾಗಲೇ ರಾಜಕೀಯ ಪಕ್ಷದ ವಾಟ್ಸಾಪ್ ಗ್ರೂಪ್‌ಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. ಅಲ್ಲದೆ ರಾಜಕೀಯ ಪಕ್ಷದ ಪ್ರತಿನಿಧಿಗಳ ಸಭೆಯನ್ನು ಕರೆದು ಮಾಹಿತಿಯನ್ನು ನೀಡಲು ಚುನಾವಣಾ ಆಯೋಗ ಸ್ಪಷ್ಟ ಸೂಚನೆ ನೀಡಿದೆ.

ಅದರಂತೆ ಎಲ್ಲಾ ಮಾಹಿತಿಯನ್ನು ನೀಡಲಾಗುವುದು. ಈ ಸಂಬಂಧ ಎಲ್ಲಾ ರಾಜಕೀಯ ಪಕ್ಷದವರು ತಮ್ಮ ಇ-ಮೇಲ್ ಮಾಹಿತಿ ನೀಡಬೇಕು. ಆ ಮೂಲಕ ಪ್ರತಿದಿನ ಇಎಫ್ ನಮೂನೆಗಳ ವಿತರಣೆ ಮತ್ತು ಭರ್ತಿಯಾದ ನಮೂನೆಗಳನ್ನು ಡಿಜಿಟೈಸ್ ಮಾಡುವ ಪ್ರಕ್ರಿಯೆಗಳ ಮಾಹಿತಿಯನ್ನು ಇಮೇಲ್ ಮಾಡಲಾಗುವುದು ಎಂದು ತಿಳಿಸಿದರು.ಭರ್ತಿ ಮಾಡುವ ಬಗ್ಗೆ:ಎನ್ನೂಮರೇಷನ್ ಫಾರಂ ಮೇಲ್ಬಾಗದ ಎಡಭಾಗದ 2002ರಲ್ಲಿ ಇರುವ ಮತದಾರರು ಭರ್ತಿ ಮಾಡುವುದು ಹಾಗೂ 2002ರಲ್ಲಿ ತಂದೆ, ತಾಯಿ, ಅಜ್ಜ, ಅಜ್ಜಿಗೆ ಪ್ರೊ.ಜೆನಿಯಾಗಿ ಮ್ಯಾಪಿಂಗ್ ಮಾಡುವವರು ಬಲಭಾಗದಲ್ಲಿ 2002ರ ತಂದೆ/ತಾಯಿ/ಅಜ್ಜ ಅಜ್ಜಿ/ಯಾರಾದರೂ ಒಬ್ಬರ ಮಾಹಿತಿಯನ್ನು ದಾಖಲಿಸಬೇಕು ಹಾಗೂ ನಮೂನೆಯ ಕೆಳಭಾಗದಲ್ಲಿ 2025ರ ತಮ್ಮ ಮತದಾರರ ಮಾಹಿತಿಯನ್ನು ದಾಖಲಿಸಬೇಕೆನ್ನುವ ಮಾಹಿತಿ ನೀಡಲಾಯಿತು.

ಮಾಹಿತಿ ತಪ್ಪಾಗಿ ಭರ್ತಿ ಮಾಡದಂತೆ ಸೂಕ್ತ ಮಾರ್ಗದರ್ಶನವನ್ನು ಬಿ.ಎಲ್.ಓ ಅಥವಾ ಬಿ.ಎಲ್.ಓ ಸುಪರ್ ವೈಸರ್ ಕಡೆಯಿಂದ ಮಾಹಿತಿ ಪಡೆದು ಭರ್ತಿ ಮಾಡಲು ಸಭೆಯಲ್ಲಿ ತಿಳಿಸಲಾಯಿತು. ಎಲ್ಲಾ ಮತಗಟ್ಟೆಯ ಬಿ.ಎಲ್.ಒ. ಅವರು ತಮ್ಮ ವ್ಯಾಪ್ತಿಯಡಿ ಮತದಾರರಿಗೆ ತಿಳಿಸಲು ಮತದಾರರ ನೋಂದಾಣಿಧಿಕಾರಿ ಅವರು ಸೂಚಿಸಿದರು.ತಾಲೂಕಿನಲ್ಲಿ 2,29,080 ಮಂದಿಗೆ ಎಸ್.ಐ.ಆರ್. ಗಣತಿ ನಮೂನೆ ವಿತರಣೆ:ತಾಲೂಕಿನಲ್ಲಿ ಭಾರತದ ಚುನಾವಣಾ ಆರೋಗದ ನಿದೇಶನದಂತೆ ಕೈಗೊಳ್ಳಲಾಗುವ ವಿಶೇಷ ಸಮಗ್ರ ಪರಿಷ್ಕರಣೆ ಪ್ರಗತಿಯಲ್ಲಿದ್ದು ಈವರೆಗೆ ತಾಲೂಕಿನಲ್ಲಿ ಒಟ್ಟು 2,29,080 ಮಂದಿಗೆ ಗಣತಿ ನಮೂನೆ ವಿತರಿಸಲಾಗಿದೆ ಎಂದು ಮತದಾರರ ನೋಂದಾಣಿಧಿಕಾರಿ ಹೊನ್ನಪ್ಪ ತಿಳಿಸಿದ್ದಾರೆ.

ಜೂನ್ 30ರಂದು ಗಣತಿ ನಮೂನೆಯನ್ನು ಮತದಾರರಿಗೆ ವಿತರಿಸುವ ಕಾರ್ಯ ಆರಂಭಗೊಂಡಿದ್ದು ಜು.29ರ ತನಕ ಬಿಎಲ್‌ಓಗಳು ಮನೆಮನೆಗೆ ಭೇಟಿ ನೀಡಿ ಮತದಾರರಿಗೆ ಗಣತಿ ನಮೂನೆ ವಿತರಿಸಲಿದ್ದಾರೆ. ಈವರೆಗೆ ಗಣತಿ ನಮೂನೆ ವಿತರಣೆಯಲ್ಲಿ ಶೇ. 99.35 ಪ್ರಗತಿ ಸಾಧಿಸಲಾಗಿದೆ. 59008 ಗಣತಿ ನಮೂನೆಯನ್ನು ಡಿಜಿಟೈಸ್ ಮಾಡಲಾಗಿದೆ. ಈವರೆಗೆ ಎ.ಎಸ್.ಡಿ.ಡಿ. ಮಾರ್ಕ್ ಮಾಡಿರುವ ಸಂಖ್ಯೆ -375, ಗಣತಿಗೆ ಸಿಗದಿರುವವರು- 4, ಮರಣ ಹೊಂದಿರುವ ಮತದಾರರು- 246, ಈಗಾಗಲೇ ದಾಖಲಾತಿ ಮಾಡಿದವರು-46 ಎಂದು ಮತದಾರರ ನೋಂದಾಣಿಧಿಕಾರಿ ಮಾಹಿತಿ ನೀಡಿದ್ದಾರೆ.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಉಪ ತಹಶೀಲ್ದಾರ್ ರಂಜನ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಶಾಫಿ ಕಾಶಿಪಟ್ಣ, ನವೀನ್ ಗೌಡ, ಸುರ್ಯ ಕುಮಾರ್, ಬಿಜೆಪಿ ಪಕ್ಷದ ಮುಖಂಡ ಸೀತಾರಾಮ ಬೆಳಾಲು, ಸಿಪಿಐಎಂ ಪಕ್ಷದ ಮುಖಂಡ ಬಿ.ಎಂ.ಭಟ್, ಎಸ್.ಡಿ.ಪಿ.ಐ. ಪಕ್ಷದ ಮುಖಂಡ ಅಶ್ರಫ್, ಬಿ.ಎಸ್.ಪಿ. ಮುಖಂಡ ಶ್ರೀನಿವಾಸ್ ಹಾಗೂ ಚುನಾವಣೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here