






ಬೆಳ್ತಂಗಡಿ : ಬೆಳ್ತಂಗಡಿ ರಾಮನಗರ ಶ್ರೀದೇವಿ ಕಾಂಪ್ಲೆಕ್ಸ್, ಅಯ್ಯಪ್ಪ ದೇವಸ್ಥಾನದ ಹತ್ತಿರ, ಕಾರ್ಯಾಚರಿಸುತ್ತಿರುವ ಪ್ರವರ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಜುಲೈ 4ರಂದು ಸೊಸೈಟಿಯ ಆವರಣದಲ್ಲಿ ಸಂಘದ ಅಧ್ಯಕ್ಷರಾದ ರಾಜಿತ್ ರೈ ಟಿ.ಸಿ. ಇವರ ಅಧ್ಯಕ್ಷತೆಯಲ್ಲಿ ಜರಗಿತು.


ಸಂಘದ ಉಪಾಧ್ಯಕ್ಷ ಹೆನ್ವಿಲ್ ಮರ್ವಿನ್ ಡಿಸೋಜ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. ಕಾರ್ಯಕ್ಷೇತ್ರ ವಿಸ್ತರಿಸುವ ಕುರಿತು ಚರ್ಚಿಸಲಾಹಿತು. ಸಂಘವು 204ಸದಸ್ಯರು ಸೇರಿ ಒಟ್ಟು ರೂ.459060/-ಪಾಲು ಬಂಡವಾಳ ಹೊಂದಿದ್ದು. ವರ್ಷ್ಷ್ಯಂತ್ಯಕ್ಕೆ 233ಸದಸ್ಯರನ್ನು ಹೊಂದಿದೆ.ರೂ.537600/-ಪಾಲು ಬಂಡವಾಳ ಹೆಚ್ಚಾಗಿದೆ.ರೂ.10002371/-ಠೇವಣಿ ಸಂಗ್ರಹವಾಗಿದ್ದು ರೂ.23,76,819 ಲಕ್ಷ ಸಾಲ ವಿತರಿಸಲಾಗಿದೆ.
ಮುಖ್ಯಕಾರ್ಯನಿರ್ವಹಣಾಧಿಕಾರಿ ಪವನ್ ಕುಮಾರ್ ಶೆಟ್ಟಿ ವರದಿ ಮಂಡಿಸಿದರು. ಪ್ರಧಾನ ವ್ಯವಸ್ತಾಪಕ ಪ್ರೇಮ್ ರೋಷಲ್ ಡಿಸೋಜ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿ ಸ್ವಾತಿ ಮೀಟಿಂಗ್ ನೋಟಿಸಿದರು. ಸಿಬ್ಬಂದಿ ಅನುಷಾ ನಿರೂಪಿಸಿದರು.









