ವೇಣೂರು: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ- ಅಪ್ರಾಪ್ತರ ಬಂಧನ

0

ಬೆಳ್ತಂಗಡಿ: ಮೂರು ವರ್ಷದ ಹಿಂದೆ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ವೇಣೂರು ಠಾಣಾ ಪೊಲೀಸರು ಈರ್ವರು ಅಪ್ರಾಪ್ತರನ್ನು ಬಂಧಿಸಿದ್ದಾರೆ. ಬಾಲಕಿಯನ್ನು ಆಕೆಯ ಸಂಬಂಧಿಕನಾದ ಕಾನೂನು ಸಂಘರ್ಷಕ್ಕೊಳಗಾದ ಬಾಲಕ(೧೬) ಹಾಗೂ ಆತನ ಸ್ನೇಹಿತನಾದ ಮತ್ತೋರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕ(೧೮) ಸೇರಿ ೨೦೨೩ರಲ್ಲಿ ಬೆಳ್ತಂಗಡಿಯಲ್ಲಿರುವ ಡ್ಯಾಂ ಒಂದರ ಬಳಿಯಿರುವ ಕಟ್ಟಡಕ್ಕೆ ಕರೆದುಕೊಂಡು ಬಂದು ಲೈಂಗಿಕ ದೌರ್ಜನ್ಯ ಎಸಗಿ ಜೀವ ಬೆದರಿಕೆ ಒಡ್ಡಿದ್ದರು. ಇತ್ತೀಚೆಗೆ ಈ ವಿಚಾರ ಬಾಲಕಿಯ ತಾಯಿಯ ಗಮನಕ್ಕೆ ಬಂದಿತ್ತು. ಈ ಬಗ್ಗೆ ಜೂ.೨೩ರಂದು ಬಾಲಕಿಯ ತಾಯಿ ವೇಣೂರು ಠಾಣೆಗೆ ನೀಡಿದ ದೂರಿನಂತೆ ಕಲಂ ೩೭೬, ೩೭೬ಂಃ, ೩೭೬, ೫೦೬ ಜೊತೆಗೆ ೩೪ ಐ.ಪಿ.ಸಿ ಮತ್ತು ಕಲಂ ೬ ಪೋಕ್ಸೋ ಕಾಯಿದೆ ೨೦೧೨ರಂತೆ ಪ್ರಕರಣ ದಾಖಲಾಗಿತ್ತು. ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ಓರ್ವ ಅಪ್ರಾಪ್ತನನ್ನು ಬಂಧಿಸಿದ್ದರು.

ಮೂರು ದಿನದ ಬಳಿಕ ಇನ್ನೋರ್ವನನ್ನೂ ಬಂಧಿಸಿದ್ದಾರೆ. ಬೆಳ್ತಂಗಡಿ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಮಾರ್ಗದರ್ಶನ ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ವೇಣೂರು ಪೊಲೀಸ್ ಠಾಣೆಯ ಎಸ್‌ಐ ಅಕ್ಷಯ್ ಡವಗಿ ಅವರ ತಂಡ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

LEAVE A REPLY

Please enter your comment!
Please enter your name here