






ಬೆಳ್ತಂಗಡಿ: ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಮೂರನೇ ಹಂತದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ರಾಜ್ಯದಾದ್ಯಂತ ಜೂ.೩೦ರಂದು ಪ್ರಾರಂಭಗೊಂಡಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಎಲ್ಲಾ ಅರ್ಹ ನಾಗರಿಕರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದು ವಿಶೇಷ ಸಮಗೆ ಪರಿಷ್ಕರಣೆಯ ಉzಶವಾಗಿದೆ. ವಿಶೇಷ ಸಮಗ್ರ ಪರಿಷ್ಕರಣೆಯ ಅವಧಿಯಲ್ಲಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿ ಹಾಗೂ ಖಚಿತಪಡಿಸಿಕೊಂಡು ಪ್ರಜಾಪ್ರಭುತ್ವದ ಭದ್ರ ಅಡಿಪಾಯವಾದ ಎಸ್ಐಆರ್ನಲ್ಲಿ ಭಾಗವಾಗುವಂತೆ ಚುನಾವಣಾ ಆಯೋಗ ತಿಳಿಸಿದೆ.
ಮತಪಟ್ಟಿ ಪರಿಷ್ಕರಣೆಗೆ ನಿಯೋಜಿಸಲ್ಪಟ್ಟ ಬಿಎಲ್ಓಗಳು ಜೂ.೩೦ರಿಂದ ಜು.೨೯ರವರೆಗೆ ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಲಿದ್ದಾರೆ. ಈ ವೇಳೆ ಬಿಎಲ್ಒಗಳು ಎಸ್ಐಆರ್ ಅರ್ಜಿಯ ಪ್ರತಿಗಳನ್ನು ನೀಡಲಿದ್ದು ಮತದಾರರು ಅರ್ಜಿಯನ್ನು ಭರ್ತಿ ಮಾಡಿ ಸಹಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕಾಗಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಪರಿಶೀಲನೆ, ತಿದ್ದುಪಡಿ, ಹೊಸ ಮತದಾರರ ಹೆಸರು ಸೇರ್ಪಡೆ, ಮೃತಪಟ್ಟವರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುವ ಪ್ರಕ್ರಿಯೆಯೂ ಇದೇ ಅವಧಿಯಲ್ಲಿ ನಡೆಯಲಿದೆ.
ಎರಡೆರೆಡು ಕಡೆ ಹೆಸರು ಇದ್ದಲ್ಲಿ ಒಂದು ಕಡೆ ಮಾತ್ರ ಉಳಿಸುವ ಪ್ರಕ್ರಿಯೆಯೂ ನಡೆಯುತ್ತದೆ. ಗುರುತಿನ ಚೀಟಿಯಲ್ಲಿ ಏನಾದರೂ ದೋಷಗಳು ಇದ್ದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಕೂಡ ಅವಕಾಶವಿದೆ. ಮನೆ ಮನೆಗಳಿಗೆ ಭೇಟಿ ನೀಡುವ ಅಧಿಕಾರಿಗಳು ನಿಗದಿತ ಫಾರಂ(ಎನ್ಯೂಮರೇಷನ್ ಫಾರಂ)ಗಳನ್ನು ಭರ್ತಿ ಮಾಡಿಸಿಕೊಂಡು ವಾಪಸ್ ಪಡೆದುಕೊಳ್ಳಲಿದ್ದಾರೆ. ಮತದಾರರ ಪಟ್ಟಿಗೆ ಹೊಸ ಹೆಸರುಗಳ ಸೇರ್ಪಡೆ ಮಾಡಲಿದ್ದಾರೆ. ನಿಧನರಾದವರು, ಮನೆ ಖಾಲಿ ಮಾಡಿದವರು, ವರ್ಗಾವಣೆ ಆದವರ ಹೆಸರನ್ನು ಮತಪಟ್ಟಿಯಿಂದ ಕೈಬಿಟ್ಟು ಪರಿಷ್ಕರಣೆ ಮಾಡಲಿದ್ದಾರೆ. ಮತಪಟ್ಟಿಯಲ್ಲಿ ಎರಡು ಕಡೆ ಹೆಸರುಗಳಿದ್ದಲ್ಲಿ ಒಂದು ಕಡೆ ಮಾತ್ರ ಉಳಿಸುವ ಪ್ರಕ್ರಿಯೆ ನಡೆಯಲಿದೆ.
ಗುರುತಿನ ಚೀಟಿಯಲ್ಲಿ ಯಾವುದೇ ದೋಷಗಳು ಇದ್ದಲ್ಲಿ ಅದನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ. ಅಧಿಕಾರಿಗಳು ನೀಡಿದ ಎರಡು ಫಾರಂಗಳನ್ನು ಅರ್ಜಿದಾರರು ಭರ್ತಿ ಮಾಡಿ ಸಹಿ ಮಾಡಬೇಕು. ಬಿಎಎಲ್ಒಗಳು ಕೂಡ ಆ ಫಾರಂ ಮೇಲೆ ಸಹಿ ಮಾಡಿ ಒಂದನ್ನು ಸ್ವೀಕೃತಿಯಾಗಿ ಮತದಾರರಿಗೆ ಮರಳಿಸಿದರೆ ಇನ್ನೊಂದು ಪ್ರತಿಯನ್ನು ಅಧಿಕಾರಿಗಳು ಕೊಂಡು ಹೋಗಲಿದ್ದಾರೆ.
ಆನ್ಲೈನ್ ಮೂಲಕವೂ ಗಣತಿ ನಮೂನೆ ಭರ್ತಿ: ಗಣತಿ ನಮೂನೆಗಳನ್ನು ಭರ್ತಿ ಮಾಡುವ ಸೌಲಭ್ಯ ಆನ್ಲೈನ್ ಮೂಲಕವೂ ನಡೆಯುತ್ತದೆ. ಮೊಬೈಲ್ ಅಪ್ಲಿಕೇಶನ್ನಲ್ಲಿ ಈ ವ್ಯವಸ್ಥೆ ಜೂ.೩೦ರಿಂದ ಲಭ್ಯವಿರುತ್ತದೆ. ಪ್ರಸಕ್ತ ಸಾಲಿನ ಅಕ್ಟೋಬರ್ ೧ಕ್ಕೆ ಅನ್ವಯವಾಗುವಂತೆ ೧೮ ವರ್ಷ ತುಂಬುವವರು ಅರ್ಜಿ ನಮೂನೆ ಸಂಖ್ಯೆ ೬ರನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ನೀಡಿ ಮತದಾರರ ಪಟ್ಟಿಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಪ್ರತಿ ಬಿಎಲ್ಓ ಬಳಿ ೩೦ ಅರ್ಜಿ ನಮೂನೆ ಸಂಖ್ಯೆ ೬ ನೀಡಲಾಗುತ್ತದೆ.
ರಾಜ್ಯದಲ್ಲಿ ಪರಿಷ್ಕರಣೆಯ ವೇಳಾ ಪಟ್ಟಿ: ಜೂನ್ ೨೬ರಿಂದ ೨೯ರವರೆಗೆ ಅಧಿಕಾರಿಗಳಿಗೆ ತರಬೇತಿ ಪೂರ್ಣಗೊಂಡಿದ್ದು ಜೂ. ಜೂ.೩೦ರಿಂದ ಜು.೨೯ರವರೆಗೆ ಮನೆಮನೆ ಭೇಟಿ ನೀಡಲಿದ್ದಾರೆ. ಆಗಸ್ಟ್ ೫ಕ್ಕೆ ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ನಾಗರಿಕರಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಕೆಗೆ ಆ.೫ರಿಂದ ಸೆ.೪ರವರೆಗೆ ಅವಕಾಶ ನೀಡಿದೆ. ಅಂತಿಮವಾಗಿ ಅ.೭ರಂದು ಪರಿಷ್ಕೃತ ಮತದಾರರ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ.
ತಾಲೂಕಿನಲ್ಲಿ ೨,೬೬,೫೮೯ ಜನಸಂಖ್ಯೆ: ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು ೨,೬೬,೫೮೯ ಜನಸಂಖ್ಯೆ ಇದೆ. ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಹಾಗೂ ಪಾರದರ್ಶಕತೆ ಖಚಿತಪಡಿಸಲು ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿಯೊಂದು ಮತಗಟ್ಟೆಗೆ ಬೂತ್ ಮಟ್ಟದ ಏಜೆಂಟ್ಗಳನ್ನು ನೇಮಕ ಮಾಡಲು ಜಿಲ್ಲಾಡಳಿತ ಸೂಚಿಸಿದೆ. ಯಾವುದೇ ಒಬ್ಬ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ಅದೇ ರೀತಿ ಯಾವುದೇ ಅನರ್ಹ ಮತದಾರ ಮತದಾರರ ಪಟ್ಟಿಗೆ ಸೇರಬಾರದು ಎಂಬುದು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಮುಖ್ಯ ಉzಶ.
೩೫೬೯ ಗಣತಿ ಅರ್ಜಿಗಳು ವಿತರಣೆ: ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ದೋಷಮುಕ್ತ ಹಾಗೂ ಪಾರದರ್ಶಕವಾಗಿ ರೂಪಿಸಲು ಚುನವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಚಾಲನೆ ದೊರೆತಿದೆ. ತಾಲೂಕಿನಲ್ಲಿ ಜು.೧ರ ಸಂಜೆಯವರೆಗೆ ೯೦೬೮ ಸಾವಿರ ಅರ್ಜಿ ವಿತರಿಸಲಾಗಿದೆ.


ಮ್ಯಾಪಿಂಗ್ ೯೫ ಶೇ. ಪೂರ್ಣ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಶೇ.೯೫.೯೮ ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ. ಇನ್ನೂ ಶೇಕಡಾ ೫ ಮ್ಯಾಪಿಂಗ್ ಮಾಡಲು ಬಾಕಿ ಇದ್ದು ಮ್ಯಾಪಿಂಗ್ ಪ್ರಕ್ರಿಯೆ ಜುಲೈ ೨೮ವರೆಗೆ ನಡೆಯಲಿದೆ. ಬಾಕಿ ಇರುವ ಮತದಾರರು ತಮ್ಮ ಮತದಾನ ಕೇಂದ್ರಕ್ಕೆ ಸಂಬಂಧಿಸಿದ ಬಿಎಲ್ಓ ಮತ್ತು ಬಿಎಲ್ಓ ಸುಪರ್ ವೈಸರ್ರವರಿಗೆ ತಮ್ಮ ಮಾಹಿತಿಯನ್ನು ಅಥವಾ ತಮ್ಮ ತಂದೆ ತಾಯಿಯವರ ಮಾಹಿತಿಯನ್ನು ನೀಡುವ ಮೂಲಕ ಮ್ಯಾಪಿಂಗ್ ಮಾಡಿಕೊಳ್ಳಬಹುದು.
ಮನೆಗಳಿಗೆ ಸ್ಟಿಕ್ಕರ್: ಬಿಎಲ್ಒ ಗಣತಿ ನಮೂನೆಯನ್ನು ಮನೆಗೆ ವಿತರಿಸಿ ನೇರಳೆ ಬಣ್ಣದ ಚೌಕಾಕಾರದ ಸ್ಟಿಕರ್ ಅಂಟಿಸುತ್ತಾರೆ. ಬಿಎಲ್ಒ ಭೇಟಿ ನೀಡಿದಾಗ ಮನೆಯಲ್ಲಿ ಯಾರೂ ಇಲ್ಲದಿದ್ದರೆ ಬೀಗ ಹಾಕಿದ್ದರೆ ವೃತ್ತಾಕಾರದ ಕೆಂಪು ಬಣ್ಣದ ಸ್ಟಿಕ್ಕರ್ ಅಂಟಿಸಿ ಅದರಲ್ಲಿ ಬಿಎಲ್ಒ ಭೇಟಿ ನೀಡಿದ ದಿನಾಂಕ, ಪುನಃ ಭೇಟಿ ನೀಡುವ ದಿನಾಂಕವನ್ನು ಬರೆಯುತ್ತಾರೆ. ಅಗತ್ಯವಿದ್ದಲ್ಲಿ ಬಿಎಲ್ಒ ಒಂದು ಮನೆಗೆ ಮೂರು ಬಾರಿ ಭೇಟಿ ನೀಡುತ್ತಾರೆ. ನಿಗದಿತ ಅವಧಿಯೊಳಗೆ ಗಣತಿ ನಮೂನೆಯನ್ನು ನಿಖರವಾಗಿ ಭರ್ತಿ ಮಾಡಿ ಸಲ್ಲಿಸುವ ಎಲ್ಲ ಮತದಾರರನ್ನು ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು. ಗಣತಿ ನಮೂನೆ ಭರ್ತಿ ಮಾಡದವರ ಹೆಸರನ್ನು ಕರಡು ಪಟ್ಟಿಯಲ್ಲಿ ಸೇರಿಸುವುದಿಲ್ಲ. ಅಲ್ಲದೆ ಗಣತಿ ನಮೂನೆ ಸ್ವೀಕರಿಸುವಾಗ ಬಿಎಲ್ಒ ಯಾವುದೇ ದಾಖಲೆಯನ್ನು ಕೇಳುವುದಿಲ್ಲ. ಮತದಾರರು ತಮ್ಮ ಇತ್ತೀಚಿನ ಭಾವಚಿತ್ರ ಮಾತ್ರ ಗಣತಿ ನಮೂನೆಗೆ ಅಂಟಿಸಬೇಕು.
ಮತದಾರರು ಏನು ಮಾಡಬೇಕು: ಮನೆ ಮನೆಗಳಿಗೆ ಭೇಟಿ ನೀಡಿದ ಬಿಎಲ್ಓಗಳು ನೀಡುವ ಎರಡು ಫಾರಂಗಳನ್ನು ಭರ್ತಿ ಮಾಡಬೇಕು. ಒಂದನ್ನು ದಾಖಲೆಯಾಗಿ ಇಟ್ಟುಕೊಂಡು ಇನ್ನೊಂದನ್ನು ಅಧಿಕಾರಿಗಳಿಗೆ ಮರಳಿಸಿ ಸ್ವೀಕೃತಿ ಪಡೆದುಕೊಳ್ಳಬೇಕು. ಫಾರಂ ಮೇಲೆ ಒಂದು ಇತ್ತೀಚಿನ ಫೊಟೋ ಅಂಟಿಸಬೇಕು. ಹೊಸ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶವಿದೆ. ಅಧಿಕಾರಿಗಳ ಜೊತೆಗೆ ರಾಜಕೀಯ ಪಕ್ಷಗಳ ನೋಂದಾಯಿತ ಏಜೆಂಟ್ಗಳು ಆಗಮಿಸಲಿದ್ದಾರೆ. ಅಧಿಕಾರಿಗಳು ತಮ್ಮ ಬಳಿಯ ಪ್ರತಿಯನ್ನು ಸ್ಕ್ಯಾನ್ ಮಾಡಿ ಅದನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುತ್ತಾರೆ. ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕರಡು ಪಟ್ಟಿ ಬಿಡುಗಡೆ ಮಾಡಲಿದ್ದು ಈ ವೇಳೆ ಹೆಸರುಗಳು ಬಿಟ್ಟು ಹೋಗಿದ್ದರೆ ನಿಮ್ಮ ಬಳಿಯಿರುವ ದಾಖಲೆಗಳನ್ನು ನೀಡಿ ಮತಪಟ್ಟಿಗೆ ಸೇರಿಸಲು ಅವಕಾಶವಿದೆ.
೨೪೧ ಬಿಎಲ್ಓಗಳಿಂದ ಎಸ್.ಐ.ಆರ್: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ೨೪೧ ಬೂತ್ಗಳಲ್ಲಿ ನಡೆಯುವ ಎಸ್.ಐ.ಆರ್. ಪ್ರಕ್ರಿಯಲ್ಲಿ ೨೪೧ ಬಿಎಲ್ಓಗಳು ಹಾಗೂ ೨೯ ಮೇಲ್ವಿಚಾರಕರು ಕಾರ್ಯ ನಿರ್ವಹಿಸಲಿದ್ದಾರೆ. ಗ್ರಾಮ ಆಡಳಿತಾಧಿಕಾರಿಗಳು ಸೂಪರ್ವೈಸರ್ಗಳಾಗಿ ಕರ್ತವ್ಯ ನಿರ್ವಹಿಸಲಿದ್ದು ಒಟ್ಟು ೨೯ ಗ್ರಾಮ ಆಡಳಿತಾಧಿಕಾರಿಗಳು ಬೂತ್ಗಳಲ್ಲಿ ಮೇಲ್ವಿಚಾರಣೆ ನಡೆಸಲಿದ್ದಾರೆ. ಮತದಾರರ ನೋಂದಾವಣಾಧಿಕಾರಿಯಾಗಿ ಹೊನ್ನಪ್ಪ, ಮತದಾರರ ಸಹಾಯಕ ನೋಂದಾವಣಾಧಿಕಾರಿಯಾಗಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಕರ್ತವ್ಯ ನಿರ್ವಹಿಸಲಿದ್ದಾರೆ. ವೇಣೂರು ಹೋಬಳಿ ನೋಡಲ್ ಅಧಿಕಾರಿಯಾಗಿ ಉಪತಹಶೀಲ್ದಾರ್ ಮಲ್ಲಪ್ಪ ಪಿ. ನಡಗಡಿ, ಬೆಳ್ತಂಗಡಿ ಹೋಬಳಿ ನೋಡಲ್ ಅಧಿಕಾರಿಯಾಗಿ ಉಪತಹಶೀಲ್ದಾರ್ ರವೀಂದ್ರ ಶೆಟ್ಟಿ, ಕೊಕ್ಕಡ ಹೋಬಳಿ ನೋಡಲ್ ಅಧಿಕಾರಿಯಾಗಿ ಉಪ ತಹಶೀಲ್ದಾರ್ ನವ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನ ೧೮೦ ಅಂಗನವಾಡಿ ಕಾರ್ಯಕರ್ತೆಯರು, ೫೮ ಶಿಕ್ಷಣ ಇಲಾಖೆಯ ಸಿಬ್ಬಂದಿಗಳು, ೧ ಪಟ್ಟಣ ಪಂಚಾಯತ್ ಸಿಬ್ಬಂದಿ ಹಾಗೂ ೨ ಪಂಚಾಯತ್ ರಾಜ್ ಸಿಬ್ಬಂದಿಗಳು ಬಿಎಲ್ಓಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ವಿವರ ವ್ಯತ್ಯಾಸವಿದ್ದರೆ ನೋಟಿಸ್: ೨೦೨೫ರ ಮತ್ತು ೨೦೦೨ರ ಮತದಾರರ ಪಟ್ಟಿ ಎರಡರಲ್ಲೂ ಮತದಾರರ ಹೆಸರು ಇದ್ದು ವಿವರಗಳಲ್ಲಿ ವ್ಯತ್ಯಾಸವಿದ್ದರೆ ನೋಟಿಸ್ ನೀಡಲಾಗುತ್ತದೆ. ೨೦೨೫ರ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು ೨೦೦೨ರ ಮತದಾರರ ಪಟ್ಟಿಯಲ್ಲಿ ಮತದಾರರ ಅಥವಾ ಅವರ ಪೋಷಕರ ವಿವರ ಇಲ್ಲದೇ ಇದ್ದರೂ ನೋಟಿಸ್ ನೀಡಲಾಗುತ್ತದೆ. ನೋಟಿಸ್ ನೀಡಿದಾಕ್ಷಣ ಮತದಾರರ ಪಟ್ಟಿಯಿಂದ ಅಂಥವರ ಹೆಸರನ್ನು ಕೈಬಿಡಲಾಗುತ್ತದೆ ಎಂದರ್ಥವಲ್ಲ. ನೋಟಿಸ್ ಪಡೆದುಕೊಂಡವರು ಅಗತ್ಯ ದಾಖಲೆಗಳನ್ನು ಒದಗಿಸಿದರೆ ಆ ಪೈಕಿ ಅರ್ಹರನ್ನು ಕರಡು ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ.
ಸಹಾಯ ಕೇಂದ್ರಗಳ ಸ್ಥಾಪನೆ: ಗಣತಿ ನಮೂನೆಯನ್ನು ಭರ್ತಿ ಮಾಡಲು ಮತದಾರರಿಗೆ ನೆರವು ನೀಡಲು ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ರಚನೆ ಮಾಡಲಾಗಿದೆ. ಅದೇ ರೀತಿ ಬಿಎಲ್ಗಳಿಗೆ ನೆರವು ನೀಡಲು ಪ್ರತಿ ತಾಲೂಕಿನಲ್ಲಿ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗಿದೆ.
ಕನ್ನಡದಲ್ಲಿ ಗಣತಿ ನಮೂನೆ: ಗಣತಿ ನಮೂನೆ ಕನ್ನಡದಲ್ಲಿ ಮುದ್ರಿತವಾಗಿರುತ್ತದೆ. ಮತದಾರರು ಅದನ್ನು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಭರ್ತಿ ಮಾಡಿ ಸಹಿ ಮಾಡಿ ಹಿಂದಿರುಗಿಸಿದ ನಂತರ ಬಿಎಲ್ಒಗಳು ಗಣತಿ ನಮೂನೆಯಲ್ಲಿನ ಮಾಹಿತಿಯನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಬಿಎಲ್ಒ ಮೊಬೈಲ್ ಆಪ್ ಮೂಲಕ ಮತದಾರರ ಪಟ್ಟಿ ನಿರ್ವಹಣಾ ವ್ಯವಸ್ಥೆಯಲ್ಲಿ ಮತದಾರರ ಮಾಹಿತಿಯನ್ನು ಡಿಜಿಟಲೀಕರಣಗೊಳಿಸುತ್ತಾರೆ.
ಸಹಾಯ ಕೇಂದ್ರಗಳ ಸ್ಥಾಪನೆ: ಗಣತಿ ನಮೂನೆಯನ್ನು ಭರ್ತಿ ಮಾಡಲು ನೆರವು ನೀಡುವುದಕ್ಕಾಗಿ ಗ್ರಾಮ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಮಟ್ಟದಲ್ಲಿ ಒಟ್ಟು ೪೯ ಸಹಾಯ ಕೇಂದ್ರಗಳನ್ನು ರಚನೆ ಮಾಡಲಾಗಿದೆ. ಅದೇ ರೀತಿ ಬಿ.ಎಲ್.ಓಗಳಿಗೆ ನೆರವು ನೀಡಲು ತಾಲೂಕಿನಲ್ಲಿ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗಿದೆ.









