







ಬೆಳ್ತಂಗಡಿ: ಮಚ್ಚಿನ ಗ್ರಾಮದ ಕುತ್ತಿನ ನಿವಾಸಿ ಡಾಕಯ್ಯ ಗೌಡರು ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ್ದು, ಇದೀಗ ಅವರ ಕುಟುಂಬವು ತೀವ್ರ ಸಂಕಷ್ಟದಲ್ಲಿದೆ. ಕಡು ಬಡತನದಲ್ಲಿದ್ದ ಡಾಕಯ್ಯ ಗೌಡರು ಕುಟುಂಬದ ಆಧಾರಸ್ತಂಭವಾಗಿದ್ದರು. ಅವರ ನಿಧನದಿಂದಾಗಿ ಕುಟುಂಬವು ಅನಾಥವಾಗಿದೆ.



ಈ ದುಃಖದ ಸಮಯದಲ್ಲಿ ನೊಂದ ಕುಟುಂಬಕ್ಕೆ ಸಾಂತ್ವನ ನೀಡಲು ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಕ್ತವೃಂದ ಮುಂದಾಗಿದೆ. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಹರ್ಷ ಸಂಪಿಗೆತ್ತಾಯ ಹಾಗೂ ಭಕ್ತರ ತಂಡವು ಮೃತ ಡಾಕಯ್ಯ ಗೌಡರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.ಈ ವೇಳೆ ನೊಂದ ಕುಟುಂಬದ ನೆರವಿಗಾಗಿ ದೇವಸ್ಥಾನದ ವತಿಯಿಂದ ದೇವರ ಪ್ರಸಾದದೊಂದಿಗೆ ₹25,000 ನಗದು ಮೊತ್ತದ ಚೆಕ್ ಅನ್ನು ಹಸ್ತಾಂತರಿಸಲಾಯಿತು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಹರ್ಷ ಸಂಪಿಗೆತ್ತಾಯ, ಸುಧೀರ್ ಶೆಟ್ಟಿ ಕೋರಬೆಟ್ಟು, ಯತೀಶ್ ರೈ ಕೈಲ, ಪ್ರಮೋದ್ ಕುಮಾರ್ ಮಚ್ಚಿನ, ಚಂದ್ರಕಾಂತ್ ನಿಡ್ಡಾಜೆ, ನಾರಾಯಣ ಪೂಜಾರಿ ಬಳ್ಳಮಂಜ, ಹರ್ಷ ನಾರಾಯಣ ಶೆಟ್ಟಿ ನೆತ್ತರ, ಹೊನ್ನಪ್ಪ ಕುಲಾಲ್ ಮಣೂರು, ಹರೀಶ್ ಶೆಟ್ಟಿ ಕುತ್ತಿನ, ಗಂಗಾಧರ ಕುಲಾಲ್ ಪೆರ್ನಡ್ಕ, ಹರೀಶ್ ಪ್ರಭು ಮುದಲಡ್ಕ ಸೇರಿದಂತೆ ಹಲವು ಗಣ್ಯರು ಮತ್ತು ಭಕ್ತವೃಂದದವರು ಉಪಸ್ಥಿತರಿದ್ದರು.









