ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ – ಶಾಲಾ ಮಕ್ಕಳಿಗೆ ಲಿಂಗ ಸಮಾನತೆ ತರಬೇತಿ

0

ಡಿ.ಕೆ.ಆರ್.ಡಿ.ಎಸ್ ಹಾಗೂ ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಸಹಕಾರದಿಂದ ಶಾಲಾ ಮಕ್ಕಳಿಗೆ ಲಿಂಗ ಸಮಾನತೆಯ ಕುರಿತು ತರಬೇತಿ ಕಾರ್ಯಗಾರವನ್ನು ಜ. 27ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಇಲ್ಲಿ ಹಮ್ಮಿಕೊಳ್ಳಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಸದಸ್ಯ ಪುಷ್ಪರಾಜ್ ಇಂತಹ ಕಾರ್ಯಕ್ರಮಗಳನ್ನು ಮಕ್ಕಳಿಗೆ ಹಮ್ಮಿಕೊಳ್ಳುವುದು ಅವರ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಶಾಲೆಯ ಮುಖ್ಯೋಪಾಧ್ಯಾಯ ರಮೇಶ್ ಚವಾನ್ ಹಾಗೂ ಮಾನಿನಿ ರಾಜ್ಯ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಜಾನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸ್ನೇಹ ಕಿರಣ್ ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ವೈಶಾಲಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಡಿ.ಕೆ.ಆರ್. ಡಿ.ಎಸ್ ಸಂಸ್ಥೆಯ ಸಂಯೋಜಕಿ ಶ್ರೀಮತಿ ಸಿಸಿಲ್ಯಾ ತಾವ್ರೊರವರು ಸಮಾನತೆ ಮೊದಲು ನಮ್ಮ ಕುಟುಂಬದಲ್ಲಿ ಆಗಬೇಕು ಮತ್ತು ನಮ್ಮ ಮನೋಭಾವ ದಲ್ಲಿ ಬದಲಾವಣೆಯಾಗಬೇಕು, ಮಕ್ಕಳಾಗಿ ನಾವು ತಿಳಿದುಕೊಂಡ ವಿಚಾರ ಗಳು ಮುಂದೆ ನಮ್ಮ ಜೀವನದಲ್ಲಿ ದಾರಿದೀಪವಾಗಲಿದೆ ಹಾಗೂ ಜೀವನದ ಮೌಲ್ಯಗಳು ಮತ್ತು ಪಾಲಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ತದನಂತರ ಶಾಲಾ ಶಿಕ್ಷಕಿ ತಸ್ಮೀಯ ಪರ್ವೀನ್ ಸ್ವಾಗತಿಸಿ, ಲತಾ ಎನ್. ಎಂ ವಂದಿಸಿ ಸಂಸ್ಥೆ ಕಾರ್ಯಕರ್ತರಾದ ಮಾರ್ಕ್ ಡಿಸೋಜರವರು ಕಾರ್ಯಕ್ರಮ ನಿರೂಪಿಸಿದರು ಒಟ್ಟು 48 ವಿದ್ಯಾರ್ಥಿಗಳು ಮಾಹಿತಿಯನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here