






ಕಳೆಂಜ,: ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ವತಿಯಿಂದ ‘ಕಾರುಣ್ಯ ಸ್ಪರ್ಶಂ’ ಯೋಜನೆಯಡಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕೆರೆಕೋಡಿ ನಿವಾಸಿ ಚಿನ್ನಮ್ಮ, ಕೊಚ್ಚುಪರಂಬಿಲ್ ಅವರ ಚಿಕಿತ್ಸೆಗೆ ₹50 ಸಾವಿರ ಧನಸಹಾಯವನ್ನು ಅವರ ಸೊಸೆಯಾದ ಸೌಮ್ಯ ಅವರಿಗೆ ಹಸ್ತಾಂತರಿಸಲಾಯಿತು.


ಸಂಘದ ಅಧ್ಯಕ್ಷ ಅಗಸ್ಟೀನ್ ಟಿ.ಎ. ಮಾತನಾಡಿ, ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಸಂಘಟನೆಯ ಪ್ರಮುಖ ಧ್ಯೇಯವಾಗಿದ್ದು, ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳಲಾಗುವುದು ಎಂದು ಹೇಳಿದರು.ಗೌರವಾಧ್ಯಕ್ಷ ಸೆಬಾಸ್ಟಿಯನ್ ಪಿ.ಟಿ. ಮಾತನಾಡಿ, ಸದಸ್ಯರು ಹಾಗೂ ದಾನಿಗಳ ಉದಾರ ಸಹಕಾರದಿಂದ ಈ ಧನಸಹಾಯ ನೀಡಲು ಸಾಧ್ಯವಾಗಿದ್ದು, ಸಹಕರಿಸಿದ ಎಲ್ಲರಿಗೂ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಕಾರ್ಯದರ್ಶಿ ಶಿಜೋ ಜೋಸೆಫ್ ಮಾತನಾಡಿ, ‘ಕಾರುಣ್ಯ ಸ್ಪರ್ಶಂ’ ಯೋಜನೆಗೆ ಸ್ಪಂದಿಸಿ ನೆರವು ನೀಡಿದ ದಾನಿಗಳು, ಸದಸ್ಯರು ಹಾಗೂ ಹಿತೈಷಿಗಳ ಸಹಕಾರದಿಂದ ಈ ಮಾನವೀಯ ಕಾರ್ಯ ಯಶಸ್ವಿಯಾಗಿದೆ. ಮುಂದೆಯೂ ಅಗತ್ಯವಿರುವವರಿಗೆ ನೆರವಾಗುವ ಸಮಾಜಮುಖಿ ಕಾರ್ಯಗಳನ್ನು ಸಂಘದ ವತಿಯಿಂದ ಮುಂದುವರಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿದ್ದರು.









