






ಗಂಡಿಬಾಗಿಲು: ಆಕಸ್ಮಿಕವಾಗಿ ಮೈಮೇಲೆ ಬಿಸಿನೀರು ಬಿದ್ದು ದೇಹವಿಡೀ ಸುಟ್ಟು ಗಾಯಗೊಂಡಿರುವ ಮಗುವಿನ ಚಿಕಿತ್ಸೆ ಹಾಗೂ ಆರೈಕೆಗೆ ಇಲ್ಲಿನ ‘ಉದಯ ಮಹಾಸಂಘ’ ಮಾನವೀಯತೆಯ ನೆರವು ನೀಡುವ ಮೂಲಕ ಧಾವಿಸಿ ನಿಂತಿದೆ.ಮಹಾಸಂಘದ ವತಿಯಿಂದ ಸಂಕಷ್ಟದಲ್ಲಿರುವ ಮಗುವಿನ ಕುಟುಂಬಕ್ಕೆ ಪೌಷ್ಟಿಕ ಆಹಾರದ ಕಿಟ್ ಹಾಗೂ ಗ್ಯಾಸ್ ಸಿಲಿಂಡರ್ ಅನ್ನು ವಿತರಿಸಲಾಯಿತು.


ದಕ್ಷಿಣ ಕನ್ನಡ ರೂರಲ್ ಡೆವಲಪ್ಮೆಂಟ್ ಸೊಸೈಟಿ (ರಿ.) ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಮಹಾಸಂಘದ ಸದಸ್ಯರು, ಸಾರ್ವಜನಿಕರನ್ನು ಹಾಗೂ ವಿವಿಧ ಸಹೃದಯಿ ಜನರನ್ನು ಸಂಪರ್ಕಿಸಿ ಮಗುವಿನ ವೈದ್ಯಕೀಯ ಚಿಕಿತ್ಸೆಗಾಗಿ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಧನಸಹಾಯವನ್ನು ಸಂಗ್ರಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖ ಕಾರ್ಯಕರ್ತ ಜಾನ್ಸನ್ ಉಪಸ್ಥಿತರಿದ್ದರು. ಉದಯ ಮಹಾಸಂಘದ ಈ ಶ್ಲಾಘನೀಯ ಕಾರ್ಯಕ್ಕೆ ಹಾಗೂ ಸಂಕಷ್ಟದ ಸಮಯದಲ್ಲಿ ನೆರವಾದ ಎಲ್ಲಾ ದಾನಿಗಳಿಗೆ ದಕ್ಷಿಣ ಕನ್ನಡ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ನಿರ್ದೇಶಕರಾದ ಫಾ. ಆದರ್ಶ್ ಜೋಸೆಫ್ ಅವರು ಹೃತ್ಪೂರ್ವಕ ಕೃತಜ್ಞತೆ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.









