ಉಜಿರೆಯಲ್ಲಿ ಹಲಸು ಮತ್ತು ಹಣ್ಣು ಮೇಳ ಉದ್ಘಾಟನೆ

0

ಬೆಳ್ತಂಗಡಿ: ರೋಟರಿ ಕ್ಲಬ್ ಉಜಿರೆ, ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ ಉಜಿರೆ, ಗ್ರಾಮ ಪಂಚಾಯತ್ ಉಜಿರೆ, ಬೆನಕ ಈವೆಂಟ್ ಇವರ ಜಂಟಿ ಆಶ್ರಯದಲ್ಲಿ ಹಲಸು ಮತ್ತು ಹಣ್ಣು ಮೇಳದ ಉದ್ಘಾಟನೆ ಕಾರ್ಯಕ್ರಮ ಜೂ.26 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಬಳಿಯ ಶ್ರೀ ಕೃಷ್ಣನುಗ್ರಹ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಬೆನಕ ಈವೆಂಟ್ ಮಾಲಕ ಗಣೇಶ್ ಶೆಟ್ಟಿ, ಸಂಜೀವಿನಿ ತಾಲೂಕು ಮಟ್ಟದ ಕಾರ್ಯದರ್ಶಿ ವಿನುತಾ ರಜತ್ ಗೌಡ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು, ಕಾರ್ಯದರ್ಶಿ ಡಾ.ಎಂ.ಎಂ ದಯಾಕರ್, ಬೆನಕ ಇವೆಂಟ್ಸ್ ಸದಸ್ಯರಾದ ಸಂದೇಶ್, ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.

ಸೋಮಶೇಖರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ವಿಶೇಷ ಆಕರ್ಷಣೆ: ಹಲಸಿನ ಹಣ್ಣಿನ ಜಿಲೇಬಿ ಹಾಗೂ ಹೋಳಿಗೆಯ ಸ್ಟಾಲ್‌ಗಳು ಹಾಗೂ ಮೇಳದ ಮೆರುಗನ್ನು ಹೆಚ್ಚಿಸಲು ರಾಜ್ಯದ ವಿವಿಧ ಭಾಗದಿಂದ ಉತ್ಪನ್ನಗಳು ಹಾಗೂ ವಿಶೇಷ ಮಾರಾಟಗಾರರು ಆಗಮಿಸಿದ್ದಾರೆ.

ಮೇಳದದಲ್ಲಿ ನೂರಾರು ಮಳಿಗೆಗಳು, ಹಲವಾರು ತಿನಿಸುಗಳು, ಹಣ್ಣಿನ ಬಗೆ ಬಗೆ ಐಸ್ ಕ್ರೀಮ್‌ಗಳು, ಹಲಸಿನ ಹೋಳಿಗೆ, ವಿವಿಧ ಹಣ್ಣುಗಳು, ತರಕಾರಿ ಬೀಜಗಳು, ಹಣ್ಣಿನ ಉತ್ಪನ್ನಗಳು, ಆಯುರ್ವೇದಿಕ್ ಹಾಗೂ ಗೃಹ ತಯಾರಿಕೆಯ ಉತ್ಪನ್ನಗಳು, ವಿವಿಧ ತಳಿಯ ಹಣ್ಣಿನ ಹಾಗೂ ಹೂವಿನ ಕಸಿ ಗಿಡಗಳು ಮೇಳದಲ್ಲಿ ಲಭ್ಯವಿದೆ.

ಜೂ.26 ರಿಂದ ಜೂ. 28 ವರೆಗೆ ಬೆಳಿಗ್ಗೆ 10 ರಿಂದ ರಾತ್ರಿ 9.30 ವರೆಗೆ ನಡೆಯುತ್ತಿದೆ.ಸೆಲ್ಫ್ ಸ್ಟಾಂಡ್ ನಲ್ಲಿ ಪೋಟೋ ತೆಗೆದು ವಾಟ್ಸಪ್ ಸ್ಟೇಟಸ್ ಹಾಕಿ ಅತೀ ಹೆಚ್ಚು ವೀಕ್ಷಣೆ ಪಡೆದ 3 ವಾಟ್ಸಪ್ ಸ್ಟೇಟಸ್ ಗಳಿಗೆ ಗುಣಮಟ್ಟದ ಇಳ್ ಕಲ್ ಸೀರೆ ಬಹುಮಾನವಾಗಿ ಪಡೆಯುವ ಸುವರ್ಣಾವಕಾಶ ವೀಕ್ಷಣೆಗೊಂಡ ಸ್ಟೇಟಸ್ ಸ್ಕೀನ್ ಶಾಟ್ ನ್ನು 8105279767 ಕಳುಹಿಸಿ.

LEAVE A REPLY

Please enter your comment!
Please enter your name here