






ಬೆಳ್ತಂಗಡಿ: ಹನ್ನೊಂದು ವರ್ಷಗಳ ಹಿಂದೆ ಉಪ್ಪಿನಂಗಡಿ ಸಮೀಪದ ಗೋಳಿತೊಟ್ಟು ಬಳಿ ನಡೆದಿದ್ದ ಕೊಲೆ ಯತ್ನ ಪ್ರಕರಣವೊಂದರಲ್ಲಿ ಎಂಟು ಮಂದಿ ಆರೋಪಿಗಳನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
೨೦೧೫ರ ನ.೧೩ರಂದು ಮಧ್ಯಾಹ್ನ ಗೋಳಿತೊಟ್ಟು ನಿವಾಸಿ ಮಹಮ್ಮದ್ ಆಶ್ರಫ್ ಎಂಬವರು ತನ್ನ ಬೈಕ್‌ನಲ್ಲಿ ಮೊಹಮ್ಮದ್ ಹಾರೀಸ್ ಎಂಬವರನ್ನು ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಮಸೀದಿಗೆ ಹೋಗಿ ಪ್ರಾರ್ಥನೆ ಮುಗಿಸಿ ಹಿಂತಿರುಗಿ ಬರುತ್ತಿದ್ದಾಗ ಗೋಳಿತೊಟ್ಟು ಪೇಟೆಯಲ್ಲಿ ನಾಲ್ಕು ಬೈಕ್‌ಗಳಲ್ಲಿ ೮ ಮಂದಿ ಹಾಗೂ ಮಾರುತಿ ಒಮ್ನಿಯೊಂದರಲ್ಲಿ ಬಂದ ಮೂವರು ಸೇರಿ ಮಹಮ್ಮದ್ ಅಶ್ರಫ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ್ದಲ್ಲದೆ ಬಿಡಿಸಲು ಬಂದ ಮೊಹಮ್ಮದ್ ಹಾರೀಸ್ ಅವರಿಗೂ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ್ದರು.
ವಿಷಯ ತಿಳಿದು ಅಲ್ಲಿಗಾಗಮಿಸಿದ್ದ ಸ್ಥಳೀಯರು ಹಲ್ಲೆಗೊಳಗಾದವರನ್ನು ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ಕುರಿತು ಮೊಹಮ್ಮದ್ ಆಶ್ರಫ್ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ಆರೋಪಿಗಳಾಗಿ ಕಿರಣ್ ಶಿಶಿಲ ಯಾನೆ ಕಿರಣ್, ಪ್ರಸಾದ್ ಪೂಜಾರಿ, ಸಂತೋಷ್, ರೂಪೇಶ್, ಗಣೇಶ ಬಿ., ಮೂಲಚಂದ್ರ ಪ್ರಭು, ಗಣೇಶ ಎಂ., ಜಯಂತ ವಿ., ನಿತ್ಯಾನಂದ ಯಾನೆ ನಿತಿನ್ ಮತ್ತು ಕರುಣಾಕರ ಎ ಎಂಬವರ ವಿರುದ್ಧ ಕಲಂ ೧೪೩,೧೪೭,೪೮,೩೨೬,೩೦೭, ೫೦೬,೧೪೯ ಐಪಿಸಿಯಡಿ ಪ್ರಕರಣ ದಾಖಲಿಸಲಾಗಿತ್ತು.


ಬಳಿಕ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ಸಮಯ ಎರಡನೇ ಆರೋಪಿ ಪ್ರಸಾದ್ ಪೂಜಾರಿ ಸಾವಿಗೀಡಾಗಿದ್ದರು. ಒಂದನೇ ಆರೋಪಿಯಾದ ಬೆಳ್ತಂಗಡಿ ತಾಲೂಕಿನ ಶಿಶಿಲ ನಿವಾಸಿ ಕಿರಣ್ ನ್ಯಾಯಾಲಯಕ್ಕೆ ವಿಚಾರಣೆಗೆ ಸರಿಯಾಗಿ ಹಾಜರಾಗದೇ ಇದ್ದುದರಿಂದ ಆತನ ವಿರುದ್ಧದ ಪ್ರಕರಣವನ್ನು ಪ್ರತ್ಯೇಕಿಸಿ ಉಳಿದ ೮ ಮಂದಿ ವಿರುದ್ಧದ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆರೋಪಿಗಳನ್ನು ದೋಷಮುಕ್ತಗೊಳಿಸಿ ಜೂ.೧೯ರಂದು ತೀರ್ಪು ನೀಡಿದೆ. ಆರು ಜನ ಆರೋಪಿಗಳ ಪರ ವಕೀಲ ಚಿನ್ಮಯ್ ರೈ ಈಶ್ವರಮಂಗಲ ಹಾಗೂ ಆರೋಪಿಗಳಾದ ಮೂಲಚಂದ್ರ ಮತ್ತು ಜಯಂತ ಅವರ ಪರ ವಕೀಲ ಮಾಧವ ಪೂಜಾರಿ ವಾದಿಸಿದ್ದರು.
ಕಣಿಯೂರಿನ ಹಲ್ಲೆ ಪ್ರಕರಣದಲ್ಲಿಯೂ ಕಿರಣ್ ಶಿಶಿಲರನ್ನು ಪ್ರತ್ಯೇಕಿಸಲಾಗಿತ್ತು: ಕಣಿಯೂರು ನಿವಾಸಿ ಪ್ರವೀಣ್ ಎಂಬವರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದ ಆರೋಪಿಗಳಾದ ಕಲ್ಮಂಜದ ಪ್ರಜ್ವಲ್ ಕೆ.ವಿ. ಹಾಗೂ ಕಣಿಯೂರಿನ ರಾಧಾಕೃಷ್ಣರವರಿಗೆ ಬೆಳ್ತಂಗಡಿ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ನೀಡುವಾಗಲೂ ಪ್ರಮುಖ ಆರೋಪಿಯಾಗಿದ್ದ ಕಿರಣ್ ಶಿಶಿಲ ಅವರನ್ನು ಪ್ರತ್ಯೇಕಿಸಿ ತೀರ್ಪು ನೀಡಲಾಗಿತ್ತು. ೨೮-೦೭-೨೦೨೪ರಂದು ಮಧ್ಯಾಹ್ನ ಕಣಿಯೂರು ನಿವಾಸಿ ಪ್ರವೀಣ ಎಂಬವರು ಕಣಿಯೂರಿನ ಅಂಗಡಿಯ ಹೊರಗೆ ಸಿಟ್‌ಔಟ್‌ನಲ್ಲಿ ಕುಳಿತಿದ್ದಾಗ ಅಲ್ಲಿಗೆ ಸ್ವಿಫ್ಟ್ ಕಾರಲ್ಲಿ(ಕೆ.ಎ.-೨೧:ಝಡ್ ೯೬೩೦) ಬಂದ ರಾಧಾಕೃಷ್ಣ, ಪ್ರಜ್ವಲ್ ಕೆ.ವಿ. ಮತ್ತು ಕಿರಣ್ ಶಿಶಿಲ ಅವರು ಪ್ರವೀಣರವರ ಅಂಗಡಿಗೆ ಅಕ್ರಮ ಪ್ರವೇಶಗೈದು ಈ ಮಹೇಶ್ ಶೆಟ್ಟಿ ತಿಮರೋಡಿ ಬಗ್ಗೆ ಭಾರೀ ಪಾತೆರುವನಾ ? ನೀನು ಪಂಚಾಯತ್ ಮೆಂಬರ್ ಆದರೆ ನಿನಗಾಯಿತು, ನೀನು ಭಾರೀ ಹಾರಾಡ್ತೀಯಾ’ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಲಾಗಿತ್ತು. ಕಿರಣ್ ಶಿಶಿಲ ಮತ್ತು ಪ್ರಜ್ವಲ್ ಕೆ.ವಿ. ತನ್ನನ್ನುzಶಿಸಿಇಂತಹ ಕೇಸ್‌ಗಳು ಈ ಮೊದಲು ನಾವು ತುಂಬಾ ನೋಡಿzವೆ’ ಎಂದು ಹೇಳಿ ಮುಂದಕ್ಕೆ ಬಾಲ ಬಿಚ್ಚಿದರೆ ತಲವಾರಿನಿಂದ ಕಡಿಯುತ್ತೇವೆಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ಪ್ರವೀಣರವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಆರೋಪಿಗಳ ವಿರುದ್ಧ ಕಲಂ ೩೨೯ (೪), ೩೫೨, ೧೧೫(೨), ೧೧೮(೧), ೩೫೧ (೨), ಜೊತೆಗೆ ೩ (೫)ನಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಉಪ್ಪಿನಂಗಡಿ ಠಾಣೆಯ ಆಗಿನ ಸಹಾಯಕ ಉಪನಿರೀಕ್ಷಕ ಲಾರೆನ್ಸ್ ಪಿ.ಆರ್. ಬೆಳ್ತಂಗಡಿ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮನು ಬಿ.ಕೆ. ಅವರು ಆರೋಪಿತರಾದ ಪ್ರಜ್ವಲ್ ಕೆ.ವಿ. ಮತ್ತು ರಾಧಾಕೃಷ್ಣರವರನ್ನು ದೋಷಿಯೆಂದು ನಿರ್ಣಯಿಸಿ ಶಿಕ್ಷೆ ವಿಧಿಸಿದ್ದರು. ಕಲಂ ೧೧೫(೨), ೨೯(೪) ಬಿಎನ್‌ಎಸ್‌ನಡಿಯ ಅಪರಾಧಕ್ಕಾಗಿ ಆರು ತಿಂಗಳು ಸಾದಾ ಕಾರಾಗೃಹ ವಾಸ ಮತ್ತು ಐದು ಸಾವಿರ ರೂ.ದಂಡ ಮತ್ತು ದಂಡ ತರಲು ತಪ್ಪಿದಲ್ಲಿ ಹೆಚ್ಚುವರಿ ಮೂರು ತಿಂಗಳು ಕಾರಾಗೃಹ ವಾಸ ಹಾಗೂ ಕಲಂ ೩೫೧(೨), ೩೫೨ ಬಿಎನ್‌ಎಸ್ ನಡೆಯ ಅಪರಾಧಕ್ಕಾಗಿ ಆರು ತಿಂಗಳು ಸಾದಾ ಕಾರಾಗೃಹ ವಾಸ ಮತ್ತು ಐದು ಸಾವಿರ ದಂಡ ಮತ್ತು ದಂಡ ತರಲು ತಪ್ಪಿದಲ್ಲಿ ಹೆಚ್ಚುವರಿ ಆರು ತಿಂಗಳು ಕಾರಾಗೃಹ ವಾಸ ವಿಧಿಸಲಾಗಿದ್ದು ದಂಡದ ಮೊತ್ತವನ್ನು ಸಂತ್ರಸ್ತರ ಪರಿಹಾರಾರ್ಥವಾಗಿ ಗಾಯಾಳು ಪ್ರವೀಣ್‌ರವರಿಗೆ ನೀಡಲು ಆದೇಶಿಸಲಾಗಿತ್ತು.
ಒಂದನೇ ಆರೋಪಿ ಕಿರಣ್ ಶಿಶಿಲ ಅವರು ಸಾಕ್ಷಿ ವಿಚಾರಣೆ ಸಮಯ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಆತನ ವಿರುದ್ಧ ಪ್ರತ್ಯೇಕ ವಿಚಾರಣೆ ನಡೆಯಬೇಕಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಬೇರೆ ಬೇರೆ ಕೇಸ್‌ಗಳಲ್ಲಿ ಆರೋಪಿಯಾಗಿರುವ ಕಿರಣ್ ಶಿಶಿಲ ಅವರು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದಾರೆ. ಆದ್ದರಿಂದ ಅವರನ್ನು ಪ್ರತ್ಯೇಕಿಸಿ ಪ್ರಕರಣದ ತೀರ್ಪು ನೀಡಲಾಗುತ್ತಿದೆ. ಕಿರಣ್ ಅವರು ಪ್ರತ್ಯೇಕ ವಿಚಾರಣೆ ಎದುರಿಸಬೇಕಿದೆ.









