ಬಿಲ್ಲವ ಮತ್ತು ಬಂಟ ಸಮುದಾಯದವರ ಮುಂದೆ ಮತ್ತೆ ಕ್ಷಮೆ ಕೇಳುವುದಿಲ್ಲ-ತಿಮರೋಡಿ ಗ್ಯಾಂಗ್‌ನಲ್ಲಿ ಇಲ್ಲ-ಸೌಜನ್ಯ ಪರ ಹೋರಾಟಗಾರ್ತಿ: ಅನಿತಾ ಕಾಸರಗೋಡು

0

ಬೆಳ್ತಂಗಡಿ: ಬಿಲ್ಲವ ಹಾಗೂ ಬಂಟ ಸಮುದಾಯದವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರು ಬರ್ಕೆ ಠಾಣಾ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ವಾಸ ಅನುಭವಿಸಿದ ಬಳಿಕ ಜಾಮೀನು ಪಡೆದು ಹೊರ ಬಂದಿರುವ ಅನಿತಾ ಕಾಸರಗೋಡು ಅವರು ತಾನು ಮತ್ತೆ ಬಿಲ್ಲವ ಮತ್ತು ಬಂಟರ ಕ್ಷಮೆ ಕೇಳುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ್ದ ಅನಿತಾ ಕಾಸರಗೋಡು ಅವರು ಸುದ್ದಿ ವಾಹಿನಿಯೊಂದಿಗೆ ಮಾತನಾಡಿ ವೈರಲ್ ಆಗಿರುವುದು ನನ್ನ ಹಳೆಯ ವಿಡಿಯೋ. ಅದನ್ನು ಉzಶಪೂರ್ವಕವಾಗಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಆ ಹೇಳಿಕೆಗೆ ಸಂಬಂಧಿಸಿ ನಾನು ಈ ಹಿಂದೆಯೇ ಕ್ಷಮೆ ಕೇಳಿzನೆ. ಅದೇ ವಿಚಾರಕ್ಕೆ ಮತ್ತೆ ಮತ್ತೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ನನ್ನ ಹೇಳಿಕೆಯಲ್ಲಿ ಯಾವುದೇ ಸಮುದಾಯವನ್ನು ನಿಂದಿಸುವ ಉzಶ ಇರಲಿಲ್ಲ. ಕೋಮು ಗಲಭೆ ಅಥವಾ ಸಮಾಜದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸುವ ಉzಶವೂ ನನ್ನದಲ್ಲ.

ಕಾನೂನು ಪ್ರಕ್ರಿಯೆಗೆ ನಾನು ಸಂಪೂರ್ಣ ಸಹಕರಿಸುತ್ತೇನೆ. ದೂರು ದಾಖಲಾಗಿರುವುದನ್ನು ಸ್ವೀಕರಿಸಿzನೆ. ತನಿಖೆಗೆ ಯಾವಾಗ ಬೇಕಾದರೂ ಹಾಜರಾಗುತ್ತೇನೆ. ಆದರೆ ಕ್ಷಮೆ ಕೇಳುವುದಿಲ್ಲ ಎಂದು ತಿಳಿಸಿದ ಅವರು ಕಷ್ಟದ ಸಮಯದಲ್ಲಿ ನನಗೆ ಸಹಾಯಕ್ಕೆ ಬಂದವರು ಅನ್ಯಧರ್ಮಿಯರು. ಹಿಂದೂಗಳಿಗಿಂತ ಮುಸ್ಲಿಮರಲ್ಲಿ ಹೆಚ್ಚಿನ ಒಗ್ಗಟ್ಟು ಕಂಡಿzನೆ. ನಾವು ಯಾಕೆ ಮುಸ್ಲಿಮರನ್ನು ದ್ವೇಷಿಸಬೇಕು ಎಂದು ಪ್ರಶ್ನಿಸಿದರು. ಸೌಜನ್ಯ ಪ್ರಕರಣದ ಹೋರಾಟದ ಕುರಿತು ಮಾತನಾಡಿದ ಅವರು ನಾನು ಯಾವುದೇ ತಿಮರೋಡಿ ಗ್ಯಾಂಗ್‌ನಲ್ಲಿಲ್ಲ. ನನಗೆ ಅನ್ಯಾಯವಾದ ಸಂದರ್ಭದಲ್ಲಿ ತಿಮರೋಡಿ ಕಡೆಯವರು ನನ್ನ ಪರವಾಗಿ ನಿಲ್ಲಲಿಲ್ಲ. ಆ ಕಾರಣದಿಂದ ನಾನು ಆ ತಂಡದಿಂದ ದೂರವಾಗಿzನೆ. ನಾನು ಸೌಜನ್ಯ ಪರ ಹೋರಾಟಗಾರ್ತಿ. ಸೌಜನ್ಯ ಪ್ರಕರಣದಲ್ಲಿ ಕ್ಷೇತ್ರದ ವಿಚಾರವನ್ನು ಎಳೆದು ತರುವುದು ತಪ್ಪು. ಅದಕ್ಕೆ ಇಲಾಖೆ ಮತ್ತು ನ್ಯಾಯಾಲಯಗಳಿವೆ. ತಪ್ಪಿತಸ್ಥರು ಯಾರೇ ಆಗಿರಲಿ. ಶಿಕ್ಷೆಯಾಗಬೇಕು ಎಂದು ಹೇಳಿದರು.

ನ್ಯಾಯಾಲಯದ ವಿಚಾರಣೆಗೆ ಹಾಜರು: ೨೦೨೩ರ ಅಕ್ಟೋಬರ್ ೧೦ರಂದು ವಾಟ್ಸಾಪ್‌ನಲ್ಲಿ ಅನಿತಾ ಕಾಸರಗೋಡು ಅವರು ಸಂದೇಶ ಹಾಕಿ ನನಗೆ ಮಹೇಶಣ್ಣ ಪೋನ್ ಮಾಡಿ ಹೇಳಿದರೆ ಒಂದು ನಿಮಿಷದ ಕೆಲಸ. ಕೇರಳದಿಂದ ಕಮ್ಯೂನಿಸ್ಟ್‌ಗಳ ಒಂದು ಪಡೆಯನ್ನು ತಂದರೆ ಇಲ್ಲಿ ೧೦ ಕೊಲೆಗಳು ಆಗಿರುತ್ತದೆ. ಒಂದು ನೂರು ಜನ ಕಮ್ಯೂನಿಸ್ಟ್‌ಗಳನ್ನು ಒಟ್ಟು ಮಾಡಿದರೆ ಈ ದೀಪಕ್ ಶೆಟ್ಟಿನೂ ಇರಲ್ಲ. ರಾಕೇಶ್ ಶೆಟ್ಟಿನೂ ಇರಲ್ಲ. ವಸಂತ ಗಿಳಿಯಾರ್‌ನೂ ಇರಲ್ಲ. ಮತ್ತೆ ವಿಟೂ ಸೂರ್ಯನೂ ಇರಲ್ಲ. ಕತಕತ ಅಂತ ಕೊಲೆ ಮಾಡಿ ಹೋಗುತ್ತಾರೆ. ಕೇರಳದಲ್ಲಿ ಹೋರಾಡುವ ಸ್ಟೈಲ್ ಅಂತದ್ದು. ರಕ್ತಕ್ಕೆ ರಕ್ತ ಎಂದು ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ತನಿಖಾಧಿಕಾರಿಯವರು ಅನಿತಾ ಕಾಸರಗೋಡು ವಿರುದ್ಧ ಬೆಳ್ತಂಗಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಅನಿತಾ ಕಾಸರಗೋಡು ಹಾಜರಾಗಿದ್ದರು.

LEAVE A REPLY

Please enter your comment!
Please enter your name here