






ಮೈಸೂರಿನಲ್ಲಿ ರೋಟರಿ ಪ್ರಶಸ್ತಿ ಸಮಾರಂಭದಲ್ಲಿ ಇತಿಹಾಸ ನಿರ್ಮಿಸಿದ ಮಡಂತ್ಯಾರ್ ರೋಟರಿ ಕ್ಲಬ್ಮಡಂತ್ಯಾರ್ ರೋಟರಿಗೆ ಪ್ರತಿಷ್ಠಿತ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ ಸೇವಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು
ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿರುವ ಮಡಂತ್ಯಾರ್ ರೋಟರಿ ಕ್ಲಬ್ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಜಿಲ್ಲಾ ರೋಟರಿ ಪ್ರಶಸ್ತಿ ಸಮಾರಂಭದಲ್ಲಿ ಸಣ್ಣ ಕ್ಲಬ್ ವಿಭಾಗದಲ್ಲಿ ಅತ್ಯುನ್ನತ ಗೌರವವಾದ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ಪಡೆದು ಐತಿಹಾಸಿಕ ಸಾಧನೆ ಮಾಡಿದೆ.
ಈ ಪ್ರಶಸ್ತಿ ಕ್ಲಬ್ನ ಸೇವಾ ಬದ್ಧತೆ, ಸಂಘಟಿತ ಕಾರ್ಯಪದ್ಧತಿ ಮತ್ತು ಸದಸ್ಯರ ಸಮರ್ಪಣೆಗೆ ಸಂದ ಅತ್ಯುನ್ನತ ಗೌರವವಾಗಿದೆ.ಕಳೆದ ಆರು ವರ್ಷಗಳಿಂದ ಸಮಾಜಮುಖಿ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಈ ಕ್ಲಬ್ ಕಳೆದ ಮೂರು ವರ್ಷಗಳಲ್ಲಿ ನಿರಂತರವಾಗಿ ಸಾಧನೆಯ ಮೆಟ್ಟಿಲುಗಳನ್ನು ಏರುತ್ತ ಬಂದಿದೆ. ಇದೀಗ 2025–26ನೇ ಸಾಲಿನಲ್ಲಿ ಅತ್ಯುನ್ನತ ಗ್ಲೋಬಲ್ ಎಕ್ಸಲೆನ್ಸ್ ಫಲಕವನ್ನು ತನ್ನದಾಗಿಸಿಕೊಂಡು ಹೊಸ ಇತಿಹಾಸ ನಿರ್ಮಿಸಿದೆ.
2025-2026 ನೇ ರೋಟರಿ ವರ್ಷದಲ್ಲಿ ಸಮರ್ಥ ನಾಯಕತ್ವದ ಅಧ್ಯಕ್ಷರಾದ ರೋ. ಪಿ.ಯಚ್.ಎಫ್ ಮಾಕ್ಸಿಮ್ ಅಲ್ಬುಕರ್ಕ್ ಅವರ ನೇತ್ರತ್ವದಲ್ಲಿ ಹಾಗೂ ಸಮರ್ಥ ಕಾರ್ಯದರ್ಶಿಯವರಾದ ರೋ. ಪಿ ಯಚ್ ಎಫ್ ವಾಸುದೇವ ಗೌಡ, ಹಿರಿಯ ರೋಟರಿ ಸದಸ್ಯರ ಮಾರ್ಗದರ್ಶನ ಹಾಗೂ ಸರ್ವ ಸದಸ್ಯರ ಸಹಕಾರದಿಂದ ಸೂಕ್ತ ಯೋಜನೆ, ನಿರಂತರ ಅನುಸರಣೆ ಮತ್ತು ಪ್ರತಿಯೊಬ್ಬ ಸದಸ್ಯರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಕ್ಲಬ್ ಒಂದು ವರ್ಷದ ಅವಧಿಯಲ್ಲಿ ಗಮನಾರ್ಹ ಸಾಧನೆಗಳನ್ನು ದಾಖಲಿಸಿದೆ.
ಸಾರ್ವಜನಿಕ ಸಂಪರ್ಕಕ್ಕೆ ಸಂಬಂಧಿಸಿದ 55 ಕಾರ್ಯಕ್ರಮಗಳು, 98 ಸಮುದಾಯ ಸೇವಾ ಯೋಜನೆಗಳು, 23 ಕ್ಲಬ್ ಸೇವಾ ಚಟುವಟಿಕೆಗಳು ಹಾಗೂ ವಿವಿಧ ವೃತ್ತಿಪರ ಸೇವಾ ಯೋಜನೆಗಳ ಮೂಲಕ ಸಮಾಜದಲ್ಲಿ ಪರಿಣಾಮಕಾರಿ ಸೇವೆ ಸಲ್ಲಿಸಲಾಗಿದೆ.ಸದಸ್ಯತ್ವ ವೃದ್ಧಿಯಲ್ಲಿಯೂ ಕ್ಲಬ್ ಮಹತ್ವದ ಸಾಧನೆ ಮಾಡಿ 14 ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿದ್ದು, ಮೈ ರೋಟರಿಯಲ್ಲಿ ಶೇ.100ರಷ್ಟು ಸದಸ್ಯರ ನೋಂದಣಿ ಪೂರ್ಣಗೊಳಿಸಿದೆ. ಜೊತೆಗೆ ಸದಸ್ಯರು ರೋಟರಿ ದತ್ತಿನಿಧಿಗೆ ಗಮನಾರ್ಹ ಕೊಡುಗೆ ನೀಡಿದ್ದು, ಮೂರು ಹೊಸ PHF ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದೆ.


ಈ ಅವಧಿಯಲ್ಲಿ ಕ್ಲಬ್ ಸುಮಾರು 30 ಲಕ್ಷ ರೂಪಾಯಿಗೂ ಅಧಿಕ ಮೊತ್ತವನ್ನು ವಿವಿಧ ಸೇವಾ ಕಾರ್ಯಗಳಿಗೆ ವೆಚ್ಚಮಾಡಿದೆ.ಈ ಸಾಲಿನಲ್ಲಿ ಕ್ಲಬ್ ಕೈಗೊಂಡ ಶಾಶ್ವತ ಅಭಿವೃದ್ಧಿ ಯೋಜನೆಗಳು ವಿಶೇಷ ಮೆಚ್ಚುಗೆಗೆ ಪಾತ್ರವಾಗಿವೆ. ಆರ್ಥಿಕವಾಗಿ ಹಿಂದುಳಿದ ಮಹಿಳೆಯೊಬ್ಬರಿಗೆ ಮನೆ ನಿರ್ಮಾಣ, ಒಂದು ಕಾಲು ಕಳೆದುಕೊಂಡ ಬಡ ಮಹಿಳೆಗೆ ಕೃತಕ ಕಾಲು ಜೋಡಣೆ,ಪಾರೆಂಕಿಯಲ್ಲಿ ಅಮೃತ ಗಾರ್ಡನ್ ಅಭಿವೃದ್ಧಿ, ಸಾಲುಮರದಲ್ಲಿ ಬಸ್ ನಿಲ್ದಾಣ ನಿರ್ಮಾಣ, ಕೊಮ್ಮಿನಡ್ಕ ಅಂಗನವಾಡಿಗೆ ಮೇಲ್ಛಾವಣಿ ನಿರ್ಮಾಣ, ಶಾಲೆಗಳಿಗೆ ಧ್ವನಿವರ್ಧಕ ವ್ಯವಸ್ಥೆಗಳ ವಿತರಣೆ, ಅಂಗನವಾಡಿಗಳಿಗೆ ಕುರ್ಚಿ-ಮೇಜುಗಳ ದಾನ, ಗಾರ್ಡಿಯನ್ ಎಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆಗೆ ಪೋಡಿಯಂ ವಿತರಣೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಬಾಲಕಿಯರಿಗೆ ಮಾಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಹಾಗೂ ಪ್ಯಾಡ್ ವಿತರಣೆ ಸೇರಿದಂತೆ ಆರೋಗ್ಯ, ಶಿಕ್ಷಣ ಮತ್ತು ಸಮುದಾಯ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಕ್ಲಬ್ ಸದಸ್ಯರ ಸಮರ್ಪಣೆ, ದಾನಿಗಳ ಬೆಂಬಲ, ಸಮಾಜದ ಸಹಕಾರ ಮತ್ತು ಸೇವೆಯ ನಿಷ್ಠೆಯಿಂದ ಸಾಧ್ಯವಾದ ಈ ಸಾಧನೆ ಮಡಂತ್ಯಾರ್ ರೋಟರಿ ಕ್ಲಬ್ ಇತಿಹಾಸದಲ್ಲಿಯೇ ಒಂದು ಸುವರ್ಣ ಅಧ್ಯಾಯವಾಗಿ ದಾಖಲಾಗಿದ್ದು, ಸಮಾಜ ಪರಿವರ್ತನೆಯ ದಿಕ್ಕಿನಲ್ಲಿ ಕ್ಲಬ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಪ್ರಶಸ್ತಿ ಕೇವಲ ಕ್ಲಬ್ಗೆ ಸಂದ ಗೌರವವಲ್ಲ, ಸೇವೆಯ ಮೂಲಕ ಸಮಾಜದಲ್ಲಿ ಶಾಶ್ವತ ಬದಲಾವಣೆ ತರಬಹುದೆಂಬ ರೋಟರಿಯ ಮಹತ್ವದ ಸಂದೇಶಕ್ಕೂ ದೊರೆತ ಮಾನ್ಯತೆಯಾಗಿದೆ.
ಈ ಪ್ರಶಸ್ತಿಯನ್ನು ಜಿಲ್ಲಾ ಗವರ್ನರ್ ರೋ. ರಾಮಕೃಷ್ಣ ಪಿ.ಕೆ, ನಿಯೋಜಿತ ಜಿಲ್ಲಾ ಗವರ್ನರ್ ರೋ.ಸತೀಶ್ ಬೋಳಾರ್, 2027-2028 ರ ನಾಮ ನಿರ್ದೇಶಿತ ಜಿಲ್ಲಾ ಗವರ್ನರ್ ರೋ. ಯಶಸ್ವಿ ಸೋಮಶೇಖರ್, ನಿಕಟ ಪೂರ್ವ ಜಿಲ್ಲಾ ಗವರ್ನರ್ ರೋ. ವಿಕ್ರಮ್ ದತ್ತ ಮತ್ತು ಅಸಿಸ್ಟೆಂಟ್ ಜಿಲ್ಲಾ ಗವರ್ನರ್ ಜಯಕುಮಾರ್ ಶೆಟ್ಟಿ, ZL.ರೋ. ಪ್ರಕಾಶ್ ಬಾಳಿಗ ರವರ ಉಪಸ್ಥಿತಿಯಲ್ಲಿ ಅಧ್ಯಕ್ಷ ರೋ. ಮ್ಯಾಕ್ಸಿಮ್ ಅಲ್ಬುಕರ್ಕ್ ವರಿಗೆ ಪ್ರಶಸ್ತಿಯನ್ನು ಹಾಸ್ತಾoತರಿಸಲಾಯಿತು.
ಈ ಸಂಧರ್ಭದಲ್ಲಿ ಕಾರ್ಯದರ್ಶಿ ರೋ. ವಾಸುದೇವಾ ಗೌಡ, ಖಜಾಂಜಿ ರೋ. ಸುರೇಶ ಸೋಣಂದೂರು 2026-2027 ರ ನಿಯೋಜಿತ ಅಧ್ಯಕ್ಷ ರೋ. ಪ್ರಶಾಂತ್ ಶೆಟ್ಟಿ ಮೂಡಯೂರು, ನಿಕಟ ಪೂರ್ವ ಅಧ್ಯಕ್ಷ ರೋ. ನಿತ್ಯಾನಂದ ಬಿ, ರೋ. ಪ್ರಾನ್ಸಿಸ್, ರೋ. ಹೆರಾಲ್ಡ್ ಮೋನಿಸ್, ರೋ. ದಿನಾಕರ್ ಶೆಟ್ಟಿ, ರೋ. ಉದಯ ಕುಮಾರ್ ಜೈನ್, ರೋ. ತುಳಸಿ ದಾಸ್ ಪೈ. ಮತ್ತು ಅಶೋಕ್ ರವರು ಉಪಸ್ಥಿತರಿದ್ದರು.









