ಹತ್ಯಡ್ಕ : ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ: ಶಿಶಿಲ-ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಸ್ಥಳೀಯರಿಂದ ತೆರವು ಕಾರ್ಯ

0

ಬೆಳ್ತಂಗಡಿ: ಭಾರೀ ಗಾಳಿ ಮಳೆಯಿಂದಾಗಿ ಅರಸಿನಮಕ್ಕಿ -ಕೊಕ್ಕಡ ಮುಖ್ಯ ರಸ್ತೆಯ ಹತ್ಯಡ್ಕ ಗ್ರಾಮದ ಫಲಸ್ತಡ್ಕ ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಕೆಲಕಾಲ ವಾಹನ ಸಂಚಾರಕ್ಕೆ ಅಡಚನೆ ಉಂಟಾದ ಘಟನೆ ಇಂದು(ಜೂ.23) ಮಧ್ಯಾಹ್ನ ನಡೆದಿದೆ.

ಮರವು ವಿದ್ಯುತ್ ತಂತಿಯ ಮೇಲೆ ಬಿದ್ದ ಕಾರಣ ವಿದ್ಯುತ್‌ ವ್ಯತ್ಯಯ ಉಂಟಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತಿನ ಶಿಶಿಲ -ಅರಸಿನಮಕ್ಕಿ ನಿರ್ವಹಣಾ ತಂಡದ ಸದಸ್ಯರಾದ ಅವಿನಾಶ್ ಬಿಡೆ, ಆನಂದ ನಾಯ್ಕ, ರಮೇಶ್ಬೈರ ಕಟ್ಟ,ಉಮೇಶ್ ಶಿಶಿಲ, ಸ್ಥಳಕ್ಕೆ ಆಗಮಿಸಿ ಸ್ಥಳೀಯರಾದ ಶಿವರಾಮ ಫಲಸ್ತಡ್ಕ ಹಾಗೂ ಶಶಿಕಾಂತ್ ಉಪ್ಪರಡ್ಕ ಇವರೊಂದಿಗೆ ಸೇರಿ ಮರವನ್ನು ತೆರವುಗೊಳಿಸುವಲ್ಲಿ ಸಹಕರಿಸಿ ಕೂಡಲೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

LEAVE A REPLY

Please enter your comment!
Please enter your name here