






ಗೇರುಕಟ್ಟೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕಇದರ ಕ್ಷೀರ ಸಂಗಮ ಸಬಾಭವನ ಕಳಿಯ ಗೇರುಕಟ್ಟೆ ಶಾಖೆಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು ಯೋಗ ಪ್ರಾತ್ಯಕ್ಷಿಕೆಯನ್ನು ಸತೀಶ ಭಂಡಾರಿ ನಾಳ ನಿರ್ವಹಿಸಿದರು.


ಹಿರಿಯ ಯೋಗಬಂಧು ದಿವಾಕರ ಆಚಾರ್ಯ ಬೌದ್ಧಿಕ ನೀಡಿ ಯೋಗದಿಂದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಪತಂಜಲಿ ಮಹರ್ಷಿಗಳ ಯೋಗದ ಅಷ್ಟಾಂಗ ಸೂತ್ರದ ಅನುಷ್ಠಾನದ ಅಗತ್ಯವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿಅಶೋಕ ,ಶಿವಣ್ಣ,ರತ್ನಾಕರ, ವಸಂತ ,ಪ್ರಜ್ವಲ್ ,ಪಂಕಜ್ ,ಜಿತೇಶ್ , ಪ್ರೀತಮ್ ,ಭಾರತಿ ಯಂ.ಯಲ್,ಪದ್ಮಲತಾ,ಅಂಜಲಿ , ಅಕ್ಷಿತಾ,ಆದ್ಯ ಕೃತಿಕಾ ಭಾಗವಹಿಸಿದ್ದರು. ಕೇಂದ್ರದ ಸಂಚಾಲಕ ವಿಜಯ ಕಾರ್ಯಕ್ರಮ ನಿರ್ವಹಿಸಿದರು.









