






ಬೆಳ್ತಂಗಡಿ: ಮಂಗಳೂರಿನ ಖಾಸಗಿ ಟಿ.ವಿ.ಯಲ್ಲಿ ಬುರುಡೆ ಗ್ಯಾಂಗ್ ಹೆಸರಿನ ಪ್ರಸಂಗ ಅಭಿನಯಿಸಿದ್ದ ಯಕ್ಷಗಾನ ಕಲಾವಿದರಿಗೆ ದೂರವಾಣಿ ಕರೆ ಮಾಡಿ ನಿಂದಿಸಿ ಬೆದರಿಸಿದ ಆರೋಪದ ವಿಚಾರದಲ್ಲಿ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ಕೇಸಿಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಬುರುಡೆ ಗ್ಯಾಂಗ್ ಪ್ರಸಂಗದಲ್ಲಿ ತಮ್ಮ ಹೋರಾಟವನ್ನು ಹಾಸ್ಯ ಮಾಡಲಾಗಿದೆ ಎಂದು ಆಕ್ರೋಶಗೊಂಡಿದ್ದ ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥರೂ ಆಗಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಕಲಾವಿದರನ್ನು ನಿಂದಿಸಿ ಬೆದರಿಕೆ ಹಾಕಿದ್ದರು ಎಂದು ಪುತ್ತೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.


ಜೂ.22ರಂದು ಮಹೇಶ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಖಾಸಗಿ ಸಂಭಾಷಣೆ ವೈರಲ್ ಆಗಿದ್ದು ಹೇಗೆ ಎಂದು ಪ್ರಶ್ನೆ ಮಾಡಿದೆ.ಅಲ್ಲದೆ ಮಹೇಶ್ ಶೆಟ್ಟಿ ತಿಮರೋಡಿಗೆ ತನಿಖಾಧಿಕಾರಿ ಮುಂದೆ ಹಾಜರಾಗಲು ಸೂಚನೆ ನೀಡಿದೆ.
ತನಿಖೆಗೆ ಸಹಕರಿಸುವಂತೆಯೂ ಹೈಕೋರ್ಟ್ ತಿಮರೋಡಿಗೆ ನಿರ್ದೇಶಿಸಿದೆ.ಜತೆಗೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ ನೀಡಿದೆ.









