ಉಜಿರೆಯ ಕುಮಾರಿ ಸಂಯುಕ್ತಾ ನಾಯಕ್ ಸಿ. ಎ. ಪರೀಕ್ಷೆಯಲ್ಲಿ ಉತ್ತೀರ್ಣ

0

ಉಜಿರೆ : ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಮೇ 2026 ರ ಸಿ.ಎ. ಫೈನಲ್ ಪರೀಕ್ಷೆಯಲ್ಲಿ ಉಜಿರೆಯ ಸಂಯುಕ್ತ ನಾಯಕ್ ತೇರ್ಗಡೆ ಹೊಂದಿ, ಚಾರ್ಟರ್ಡ್ ಅಕೌಂಟೆಂಟ್ ಆಗಿ ಅರ್ಹತೆ ಪಡೆದಿರುತ್ತಾರೆ.

ಇವರು ಉಜಿರೆಯ ಶ್ರೀ ಗಣೇಶ್ ಐಸ್-ಕ್ರೀಮ್ ಪಾರ್ಲರ್ ಮಾಲೀಕ ಎಂ. ರಾಜಾರಾಮ್ ನಾಯಕ್ ಮತ್ತು ಸಾಧನಾ ನಾಯಕ್ ದಂಪತಿಯ ಪುತ್ರಿ. ಮಂಗಳೂರಿನ ಪ್ರತಿಷ್ಠಿತ “ಎಂ. ಜಗನ್ನಾಥ್ ಕಾಮತ್ ಆಂಡ್ ಕೋ” ಸಂಸ್ಥೆಯಲ್ಲಿ ಆರ್ಟಿಕಲ್‌ಶಿಪ್ ತರಬೇತಿ ಪಡೆದು, ತಮ್ಮ ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನದಿಂದ ಇಂದು ಈ ಉನ್ನತ ಸಾಧನೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here