






ಬೆಂಗಳೂರು, ಜೂನ್ 21: ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ಬೆಳ್ತಂಗಡಿಯ ಯುವಕರು ಬೆಂಗಳೂರಿನ AECS ಲೇಔಟ್ ನಲ್ಲಿ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಂದು ಜೂ.21 ರಂದು ಬೆಳಗ್ಗೆ ಯೋಗಾಭ್ಯಾಸ ನಡೆಸುವ ಮೂಲಕ ಯೋಗದ ಮಹತ್ವವನ್ನು ಸಾರಿದರು.


ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಕ್ರಿಯೇಟಿವ್ ಸ್ಮೈಲ್ ಆಟಿಸಂ ಸರ್ವಿಸ್ ಬೆಂಗಳೂರು ಸಂಸ್ಥೆಯ ಮಾಲೀಕ ಪ್ರವೀಣ್, ಸುದ್ದಿ ನ್ಯೂಸ್ನ ಪ್ರೊಡಕ್ಷನ್ ಹೆಡ್ ಪುಷ್ಪರಾಜ್ ಶೆಟ್ಟಿ, ಸಾಯಿರಾಂ ಫ್ರೆಂಡ್ಸ್ ಗುರುವಾಯನಕೆರೆ ಸದಸ್ಯರಾದ ರಿಜೇಶ್, ಪ್ರದೀಪ್ ಶೆಟ್ಟಿ ಪಾಡ್ಯಾರ್, ಪ್ರದೀಪ್ ಶೆಟ್ಟಿ ರತ್ನಗಿರಿ, ಅವಿನಾಶ್, ಗಣೇಶ್, ನವೀನ್, ದೀಕ್ಷಿತ್, ಸುದೀರ್ ಚಾರ್ಮಾಡಿ, ಗುರು ಲಾಯಿಲ, ಗುರುಪ್ರಸಾದ್, ಜೀವನ್ ಸೇರಿದಂತೆ ಹಲವರು ಭಾಗವಹಿಸಿ ಯೋಗಾಭ್ಯಾಸ ನಡೆಸಿದರು.ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಯುವಕರು ಯೋಗಾಭ್ಯಾಸದ ಮೂಲಕ ಆರೋಗ್ಯಕರ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.









