






ಬೆಳ್ತಂಗಡಿ: ಪಿ.ಎಂ ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2026–27 ನೇ ಸಾಲಿನ ಶಾಲಾ ಮಂತ್ರಿಮಂಡಲ ರಚನೆಗಾಗಿ ಜೂನ್ 08 ರಂದು ಚುನಾವಣಾ ಪ್ರಕ್ರಿಯೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು.


ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಾರ್ವತ್ರಿಕ ಚುನಾವಣಾ ಪದ್ಧತಿಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇಶದ ಸಾರ್ವತ್ರಿಕ ಚುನಾವಣಾ ಮಾದರಿಯಲ್ಲೇ ಇವಿಎಂ (EVM) ಮಿಷನ್ ಆಪ್ ಬಳಸಿ ಮೊಬೈಲ್ ಮೂಲಕ ಅತ್ಯಾಧುನಿಕ ಹಾಗೂ ಪಾರದರ್ಶಕ ಮತದಾನ ಪ್ರಕ್ರಿಯೆಯನ್ನು ಆಯೋಜಿಸಿದ್ದು ಈ ಬಾರಿಯ ವಿಶೇಷವಾಗಿತ್ತು.ಮಾರ್ಗದರ್ಶನ ಮತ್ತು ಸಹಕಾರಶಾಲೆಯ ಮುಖ್ಯ ಶಿಕ್ಷಕರಾದ ಪಿ. ಶಿವಾನಂದ ಭಂಡಾರಿ ಅವರು ಮುಖ್ಯ ಚುನಾವಣಾ ಅಧಿಕಾರಿಯಾಗಿ ಇಡೀ ಪ್ರಕ್ರಿಯೆಗೆ ಸೂಕ್ತ ಮಾರ್ಗದರ್ಶನ ನೀಡಿದರು. ಶಾಲೆಯ ಎಲ್ಲಾ ಸಹಶಿಕ್ಷಕ ವೃಂದದ ಸಕ್ರಿಯ ಸಹಕಾರದೊಂದಿಗೆ ಇಡೀ ಪ್ರಕ್ರಿಯೆಯು ನಿಯಮಾನುಸಾರ ಶಾಂತಿಯುತವಾಗಿ ಜರುಗಿತು. ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರಾಯೋಗಿಕವಾಗಿ ಮನವರಿಕೆ ಮಾಡಿಕೊಂಡರು.ಫಲಿತಾಂಶ ಘೋಷಣೆ: ಗಣ್ಯಶ್ರೀ ನಾಯಕಿ, ಲೋಹಿತ್ ಉಪನಾಯಕಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಅದೇ ದಿನ ಮಧ್ಯಾಹ್ನದ ನಂತರ ಕೌತುಕದ ಮತ ಎಣಿಕೆ ಕಾರ್ಯ ನಡೆಸಿ, ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಯಿತು.ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ನೂತನ ಶಾಲಾ ಮಂತ್ರಿಮಂಡಲದ ನಾಯಕಿಯಾಗಿ ಕು. ಗಣ್ಯಶ್ರೀ ಹಾಗೂ ಉಪನಾಯಕನಾಗಿ ಮಾ. ಲೋಹಿತ್ ಆಯ್ಕೆಯಾಗಿದ್ದಾರೆ.
ಇವರೊಂದಿಗೆ ಪ್ರಬಲ ಪೈಪೋಟಿ ನೀಡಿದ ಕು. ವರ್ಷಿತಾ ಅವರು ವಿರೋಧ ಪಕ್ಷದ ನಾಯಕಿಯಾಗಿ ನಿಯುಕ್ತರಾಗಿದ್ದಾರೆ.ನೂತನ ಸಚಿವ ಸಂಪುಟದ ವಿವರ:ಶಾಲೆಯ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಲು ಈ ಕೆಳಗಿನ ವಿದ್ಯಾರ್ಥಿಗಳನ್ನು ಮಂತ್ರಿಗಳಾಗಿ ಆಯ್ಕೆ ಮಾಡಲಾಯಿತು:ಶಿಕ್ಷಣ ಮಂತ್ರಿಗಳು: ಯಶ್ವಿನ್ ವೈ ಶೆಟ್ಟಿ, ಅನೂಫ್ ಅಲಿಗೃಹ ಮಂತ್ರಿಗಳು: ಪೂರ್ಣೇಶ, ಶರಣಪ್ಪಹಣಕಾಸು ಮಂತ್ರಿಗಳು: ಪಂಚಮಿ, ವಿಲಾಸ್ಆರೋಗ್ಯ ಮಂತ್ರಿಗಳು: ಶ್ರೀಶಾಂತ್, ಆರ್ಯನ್ಆಹಾರ ಮಂತ್ರಿಗಳು: ಆರವ್, ವರ್ಷಿತಾಕ್ರೀಡಾ ಮಂತ್ರಿಗಳು: ಸಹನ್ ಬೋಧ್, ಪ್ರೀತಮ್ರಕ್ಷಣಾ ಮಂತ್ರಿಗಳು: ವೈ. ರೋಹಿತ್, ಅಭಿಷೇಕ್ನೀರಾವರಿ ಮಂತ್ರಿಗಳು: ಸುಜನ್, ಮಹಮ್ಮದ್ ಹಫೀಝುವಾರ್ತಾ ಮಂತ್ರಿಗಳು: ಯಶ್ವಿತ್, ಫಾತಿಮತ್ ಶಿಫಾನಸ್ವಚ್ಛತಾ ಮಂತ್ರಿಗಳು: ಫಾತಿಮತ್ ರಶಾನ, ಹವೀಶ್ ಶೆಟ್ಟಿಕಾನೂನು ಮಂತ್ರಿಗಳು: ನೀರಜ್, ಫಾತಿಮತ್ ಹಿಬಾಗ್ರಂಥಾಲಯ ಮಂತ್ರಿಗಳು: ಸಿರಿ, ಶೈವಿ. ಪಿ. ಶೆಟ್ಟಿತೋಟಗಾರಿಕಾ ಮಂತ್ರಿಗಳು: ಮನೀಶ್, ತೇಜಸ್ಜವಾಬ್ದಾರಿಯ ಪಾಠ: ಚುನಾವಣಾ ಪ್ರಕ್ರಿಯೆಯ ನಂತರ ನಡೆದ ಸಭೆಯಲ್ಲಿ, ನೂತನವಾಗಿ ಆಯ್ಕೆಯಾದ ಮಂತ್ರಿಮಂಡಲದ ಎಲ್ಲಾ ಪದಾಧಿಕಾರಿಗಳಿಗೆ ಶಾಲೆಯ ಶಿಸ್ತು, ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಜವಾಬ್ದಾರಿಯುತವಾಗಿ ಮತ್ತು ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸುವಂತೆ ಶಾಲಾ ಆಡಳಿತ ಮಂಡಳಿ ವತಿಯಿಂದ ಮಾರ್ಗದರ್ಶನ ನೀಡಲಾಯಿತು. ಹೊಸ ಮಂತ್ರಿಮಂಡಲಕ್ಕೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.









