ಸೇನೆಗೆ ಆಯ್ಕೆಯಾದ ಯುವಕನಿಗೆ ಅಭಿನಂದನೆ

0

ಬೆಳ್ತಂಗಡಿ: ಭಾರತೀಯ ಸೇನೆಗೆ ಆಯ್ಕೆಯಾದ ಮಿತ್ತಬಾಗಿಲು ಗ್ರಾಮದ ನಂದಿನಿ ಹಾಗೂ ಗೋಪಾಲಕೃಷ್ಣ ದಂಪತಿಯ ಪುತ್ರ ಪುನೀತ್ ಇವರನ್ನು ಮುಂಡಾಜೆಯ ಸೋಮಂತಡ್ಕದ ಪಂಚಶ್ರೀ ಗ್ರೂಪ್ಸ್ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭ ಮುಂಡಾಜೆ ಕಾರ್ಗಿಲ್ ವನದ ರೂವಾರಿ, ಸಮಾಜ ಸೇವಕ ಸಚಿನ್ ಭಿಡೆಯವರನ್ನು ಗೌರವಿಸಲಾಯಿತು. ಪ್ರಮುಖರಾದ ನಿವೃತ್ತ ಮೇ.ಜ.ಎಂ.ವಿ. ಭಟ್, ಉದ್ಯಮಿಗಳಾದ ನಾರಾಯಣ ಗೌಡ ಕೊಳಂಬೆ, ಅರೆಕಲ್ಲು ರಾಮಚಂದ್ರ ಭಟ್, ಅಬ್ರಹಾಂ ವಿ.ಜೆ., ಮುಂಡಾಜೆ ಸಿಎ ಬ್ಯಾಂಕ್ ನಿರ್ದೇಶಕರಾದ ಚೆನ್ನಕೇಶವ, ನಾರಾಯಣ ಫಡಕೆ, ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ ಭಟ್, ಮುಂಡಾಜೆ ಪಂಚಾಯತಿ ಮಾಜಿ ಅಧ್ಯಕ್ಷರಾದ ರಾಮಣ್ಣ ಶೆಟ್ಟಿ, ವಿಶ್ವನಾಥ ಶೆಟ್ಟಿ, ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್, ನಿವೃತ್ತ ಶಿಕ್ಷಕ ಶಂಕರ್ ತಾಮನ್ಕರ್, ಪ್ರಮುಖರಾದ ನಾರಾಯಣಗೌಡ ದೇವಸ್ಯ, ವಿಠಲ ಸುವರ್ಣ, ಗಣೇಶ ಶೆಟ್ಟಿ, ಶೇಖರ,ಅಡೂರು ವೆಂಕಟ್ರಾಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here