ಕಳೆಂಜ; ಕ್ರಿಶ್ಚಿಯನ್ ಬ್ರದರ್ಸ್ ವಾರ್ಷಿಕ ಮಹಾಸಭೆ; ಸಾಮಾಜಿಕ ಸೇವಾ ಕಾರ್ಯಗಳಿಗೆ ಮೆಚ್ಚುಗೆ

0

ಕಳೆಂಜ, ಜೂನ್ 18: ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ (ರಿ.) ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಅಗಸ್ಟೀನ್ ಟಿ.ಎ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಉಪಾಧ್ಯಕ್ಷರಾದ ಮ್ಯಾಥ್ಯೂ ವಿ.ಟಿ. ಅವರು ಸ್ವಾಗತಿಸಿದರು. ಕಾರ್ಯದರ್ಶಿ ಶಿಜೋ ಜೋಸೆಫ್ ಅವರು 2025–26ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರೆ, ಕೋಶಾಧಿಕಾರಿ ರಂಜಿತ್ ಪಿ.ಎಸ್. ಅವರು ವಾರ್ಷಿಕ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟರು.

ಸದಸ್ಯರು ವರದಿ ಹಾಗೂ ಲೆಕ್ಕಪತ್ರವನ್ನು ಸರ್ವಾನುಮತದಿಂದ ಅಂಗೀಕರಿಸಿದರು.ಕಳೆದ ಸಾಲಿನಲ್ಲಿ ಸಂಘವು ಕಾರುಣ್ಯ ಸ್ಪರ್ಶಂ ಯೋಜನೆಯಡಿ ಆರ್ಥಿಕ ನೆರವು, ಸಿಪಿಆರ್ (CPR) ತರಬೇತಿ, ರಕ್ತದಾನ ಶಿಬಿರಗಳಲ್ಲಿ ಸಕ್ರಿಯ ಭಾಗವಹಿಸುವಿಕೆ ಸೇರಿದಂತೆ ಹಲವು ಸಾಮಾಜಿಕ ಹಾಗೂ ಮಾನವೀಯ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಯಿತು.ದಿವಂಗತ ಡಾ. ಟಿ.ವಿ. ಜೋಸೆಫ್ ಅವರ ಸ್ಮರಣಾರ್ಥ ಸಂಗ್ರಹಿಸಲಾದ ₹5,45,971 ಮೊತ್ತವನ್ನು ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಲಿಜೋ ಆಂಟನಿ ಎಂಬ ಮಗುವಿನ ಚಿಕಿತ್ಸೆಗೆ ಹಸ್ತಾಂತರಿಸಿರುವುದನ್ನು ಸಭೆಯಲ್ಲಿ ವಿಶೇಷವಾಗಿ ಪ್ರಶಂಸಿಸಲಾಯಿತು.ಸಭೆಯಲ್ಲಿ ಸದಸ್ಯತ್ವ ವೃದ್ಧಿ, ಕಾರುಣ್ಯ ಸ್ಪರ್ಶಂ ಯೋಜನೆಯ ವಿಸ್ತರಣೆ, ಮಾಸಿಕ ಸಭೆಗಳ ಆಯೋಜನೆ ಹಾಗೂ ಸಂಘದ ನಿಧಿ ವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಅಗಸ್ಟೀನ್ ಟಿ.ಎ., ಗೌರವಾಧ್ಯಕ್ಷರಾದ ಸೆಬಾಸ್ಟಿಯನ್ ಪಿ.ಟಿ. ಹಾಗೂ ಗೌರವ ಸಲಹೆಗಾರರಾದ ಜೋಸೆಫ್ ಕೆ.ಡಿ. ಅವರು ಸದಸ್ಯರನ್ನು ಉದ್ದೇಶಿಸಿ ಮಾತನಾಡಿ ಸಂಘದ ಸಾಮಾಜಿಕ ಸೇವಾ ಕಾರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವಂತೆ ಕರೆ ನೀಡಿದರು.

LEAVE A REPLY

Please enter your comment!
Please enter your name here