






ಉಜಿರೆ ಎಸ್ ಡಿ ಎಂ ಮಲ್ಟಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಜೂನ್ 21 ರಂದು ಉಚಿತ ಸ್ತ್ರೀರೋಗ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಶಿಬಿರ ನಡೆಯಲಿದ್ದು, ಮಹಿಳೆಯರ ಆರೋಗ್ಯ ಸಮಸ್ಯೆಗಳ ತಪಾಸಣೆ ಮತ್ತು ಸಲಹೆ ನೀಡಲಾಗುತ್ತದೆ.


ಶಿಬಿರದಲ್ಲಿ ಸ್ನಾಯು ತಪಾಸಣೆ, ಗರ್ಭಾಶಯ ತಪಾಸಣೆ, ಸ್ತನಗಳ ತಪಾಸಣೆ, ಬಂಜೆತನ ತಪಾಸಣೆ, ಗರ್ಭಕಂಠ ಮತ್ತು ಗರ್ಭಾಶಯದ ಕ್ಯಾನ್ಸರ್ ತಪಾಸಣೆ, ಮುಟ್ಟಿನ ಅಸ್ವಸ್ಥತೆಗಳ ಪರೀಕ್ಷೆ ಹಾಗೂ ಸಾಮಾನ್ಯ ಸ್ತ್ರೀರೋಗ ಸಮಸ್ಯೆಗಳ ತಪಾಸಣೆ ನಡೆಸಲಾಗುತ್ತದೆ.ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ. ಸ್ವರ್ಣಲತಾ ಹಾಗೂ ಡಾ. ಪ್ರಿಯಾಂಕ ಜಯದೇವ್ ಭಾಗವಹಿಸಲಿದ್ದಾರೆ.
ಆಸ್ಪತ್ರೆಯ ಪ್ರಕಟಣೆಯ ಪ್ರಕಾರ, ಸ್ತ್ರೀರೋಗ ವಿಭಾಗದ ಶುಲ್ಕ, ಆಸ್ಪತ್ರೆ ಶುಲ್ಕ, ಪ್ರಯೋಗಾಲಯ ಸೇವೆಗಳು ಹಾಗೂ ಔಷಧಿಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7760397878









