







ಬೆಳ್ತಂಗಡಿ: ಇಳಂತಿಲ ಗ್ರಾಮದ ರಿಫೈನ್ ನಗರದ ಮೇದಾರ ಬೆಟ್ಟುವಿನ ಪ್ರಯಾಣಿಕರ ತಂಗುದಾಣ ಮತ್ತು ಗೂಡಂಗಡಿಯ ಮದ್ಯದ ಖಾಲಿ ಜಾಗದಲ್ಲಿ 20-03-2023ರಂದು ನಡೆದ 10ಲಕ್ಷ ದರೋಡೆ ಪ್ರಕರಣ ಸಂಬಂದ ಇಬ್ಬರು ಆರೋಪಿಗಳಿಗೆ ಬೆಳ್ತಂಗಡಿ ಕೋರ್ಟ್ ಮೂರುವರ್ಷದ ಕಾರಾಗೃಹ ಶಿಕ್ಷೆ ಮತ್ತು ಒಟ್ಟು 20ಸಾವಿರ ದಂಡ ವಿಧಿಸಿದೆ.
ಪ್ರಕರಣದ ವಿವರ: 20-03-2023ರಂದು ಇಳಂತಿಲ ಗ್ರಾಮದ ರಿಫೈನ್ ನಗರದ ಪ್ರಯಾಣಿಕರ ತಂಗುದಾಣ ಮತ್ತು ಗೂಡಂಗಡಿಯ ಮದ್ಯದ ಖಾಲಿ ಜಾಗದಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಇಳಂತಿಲದ ಕಾಯರ್ಪಾಡಿ ಮಹಮ್ಮದ್ ಕೆ ತನ್ನ ಮಗಳ ಮದುವೆಗೆ ಸಾಲ ರೂಪದಲ್ಲಿ ಸಂಗ್ರಹಿಸಿಟ್ಟಿದ್ದ 10ಲಕ್ಷ ಹಣವನ್ನು ತನ್ನ ಸ್ಕೂಟರ್ ನ ಸೀಟಿನಡಿಯಲ್ಲಿಡುವ ಸಂದರ್ಭದಲ್ಲಿ ಹಿಂದಿನಿಂದ ಬಂದ ರಿಫೈನ್ ನಗರದ ಕಡವಿನ ಬಾಗಿಲು ನಿವಾಸಿ ರಾಜೀಮ್ ಎಂಬಾತ ಹಣದ ಕಟ್ಟನ್ನು ದರೋಡೆ ಮಾಡಿದ್ದಾನೆ. ಇದನ್ನು ಕೊಕ್ಕಡದ ಮುಸ್ತಾಫ ಎಂಬಾತನಿಗೆ ನೀಡಿರುತ್ತಾನೆ.


ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿಮಹಮ್ಮದ್ ನೀಡಿದ ದೂರಿನ ಹಿನ್ನಲೆಯಲ್ಲಿ ಆಗಿನ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ ಎಸ್ ತನಿಖೆ ನಡೆಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದರು.ವಿಚಾರಣೆ ನಡೆಸಿದ ಬೆಳ್ತಂಗಡಿ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಮನು ಬಿ ಕೆರವರು ಆರೋಪಿಗಳನ್ನು ದೋಷಿಯೆಂದು ನಿರ್ಣಯಿಸಿ,ದರೋಡೆ ನಡೆಸಿದ ರಾಜೀಮ್, ಸಹಕರಿಸಿದ ಮುಸ್ತಾಪಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಟ್ಟು 20ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡದಲ್ಲಿ 10,000 ದೂರು ದಾರನಿಗೆ ನೀಡಲು ಆದೇಶಿಸಿದ್ದಾರೆ. ಸರ್ಕಾರ ಪರ ಸಹಾಯಕ ಸರ್ಕಾರಿ ಅಭಿಯೋಜಕರಾದ ದಿವ್ಯರಾಜ್ ಹೆಗ್ಡೆ ಪುತ್ತೂರು ವಾದಿಸಿದರು.









