







ಬೆಳಾಲು : ಮಾಯಾ ಫ್ರೆಂಡ್ಸ್ ಮಾಯ ಇದರ ವತಿಯಿಂದ ಮಾನ್ಸೂನ್ ಕಪ್ 2026, ಬಿಡ್ಡಿಂಗ್ ಕ್ರಿಕೆಟ್ ಪಂದ್ಯಾಟ ಜೂ. 14 ರಂದು ಮಾಯ ಮಹಾದೇವ ದೇವಸ್ಥಾನದ ವಠಾರದಲ್ಲಿ ನಡೆಯಿತು. ಪಂದ್ಯಾಟವನ್ನು ದೇವಸ್ಥಾನದ ವ್ಯವಸ್ಥಾಪಕ ಶೇಖರ ಗೌಡ ಕೊಲ್ಲಿಮಾರು ಉದ್ಘಾಟಿಸಿದರು.
ಬೆಳಾಲು ಶ್ರೀ ಕೃಷ್ಣ ಕ್ಲಿನಿಕ್ ಡಾ. ಚೇತನ್ ಮುಖ್ಯ ಅತಿಥಿಗಳಾಗಿ ಭಾಗವಸಿದ್ದರು.ಚಾಂಪಿಯನ್ ಪಟ್ಟವನ್ನು ಮಾಯಾ ಸ್ಟ್ರೈಕರ್ಸ್ ಪಡೆದುಕೊಂಡಿದ್ದು, ದ್ವಿತೀಯ ಸ್ಥಾನವನ್ನು ಹನುಮಾನ್ ವಾರಿಯರ್ಸ್ ಪಡೆದುಕೊಂಡಿರುತ್ತದೆ. ಅದೇ ರೀತಿ ಬೆಸ್ಟ್ ಬೌಲ್ ಆಗಿ ಸಂತೋಷ, ಬೆಸ್ಟ್ ಬ್ಯಾಟ್ಸ್ ಮೆನ್ ಆಗಿ ಸಂಜೀವ, ಮ್ಯಾನ್ ಆಫ್ ದ ಸೀರಿಸ್ ಭಾಸ್ಕರ ಇವರು ಪಡೆದುಕೊಂಡಿರುತ್ತಾರೆ.


ಮಾಯ ಫ್ರೆಂಡ್ಸ್ ಇದರ ವತಿಯಿಂದ ಬೈಕ್ ಅಪಘಾತದಿಂದ ಚಿಕಿತ್ಸೆ ಪಡೆಯುತ್ತಿರುವ ಫಲಾನುಭವಿ ದೇರೆಮಾರು ಬೇಬಿ ಗೌಡರಿಗೆ ರೂ. 10 ಸಾವಿರ ಮೊತ್ತ ವೇದಿಕೆಯಲ್ಲಿದ್ದ ಗಣ್ಯರು ಹಸ್ತಾಂತರ ಮಾಡಿದರು. ತಂಡಗಳ ಮಾಲಕರುಗಳಾದ ರಾಧಾಕೃಷ್ಣ ಮಾಯ, ರಾಧಾಕೃಷ್ಣ ಮಾರ್ಪಾಲ್, ಗಣೇಶ್ ಕನಿಕ್ಕಿಲ, ದಯಾನಂದ ಪಿ. ಬೆಳಾಲು,ನಜೀರ್ ಮಾಯ, ಶಿಲ್ಪಿ ಶಶಿಧರ ಆಚಾರ್ಯ ಗಾಂಧಿನಗರ,ಮತ್ತು ಕ್ರೀಡಾ ಪಟುಗಳು ಹಾಜರಿದ್ದರು.
ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಮಾಯ ಅಧ್ಯಕ್ಷತೆ ವಹಿಸಿದ್ದರು.ಅರವಿಂದ ಬೆಳಾಲು ಕಾರ್ಯಕ್ರಮ ನಿರೂಪಿಸಿದರು.ಸಮಾರೋಪ ಸಮಾರಂಭದಲ್ಲಿ ಮಾಯ ಫ್ರೆಂಡ್ಸ್ ಕಾರ್ಯದರ್ಶಿ ಗಣೇಶ್ ಕನಿಕ್ಕಿಲ ವಿಜೇತರ ಪಟ್ಟಿ ವಾಚಿಸಿದರು.ರಾಘವೇಂದ್ರ ಗೌಡ ಪಿ. ಇವರು ಎಲ್ಲರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿ ಸಹಕರಿಸಿದರು. ಮಾಯ ಫ್ರೆಂಡ್ಸ್ ಸದಸ್ಯರು, ಊರವರು ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಿದರು.









