







ಕುಕ್ಕೇಡಿ : ಬುಳೆಕ್ಕಾರ ಶ್ರೀ ಶಾರದಾಂಭ ಭಜನಾ ಮಂಡಳಿ ಶಾರದಾ ನಗರ ಇದರ ವಾರ್ಷಿಕ ಮಹಾಸಭೆ ಭಜನಾ ಮಂಡಳಿ ಅಧ್ಯಕ್ಷ ಚಂದ್ರಹಾಸ ಇವರ ಅಧ್ಯಕ್ಷತೆಯಲ್ಲಿ ಭಜನಾ ಮಂದಿರದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಸುದೀಪ್ ಕುಮಾರ್, ಕಾರ್ಯಾಧ್ಯಕ್ಷರಾಗಿ ಹರೀಶ್ ಬಂಗೇರ, ಪ್ರಧಾನ ಕಾರ್ಯದರ್ಶಿಯಾಗಿ ಸುಕೇತ್ ಕುಮಾರ್ ಆಯ್ಕೆಯಾದರು.


ಇತರ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ರಾಜೇಶ್ ಜೈನ್ ಬುಳೆಕ್ಕಾರ ಬೀಡು, ಉಪಾಧ್ಯಕ್ಷರುಗಳಾಗಿ ಗೋಪಾಲ ಶೆಟ್ಟಿ, ಸತೀಶ್ ಬಂಗೇರ, ಕಾರ್ಯದರ್ಶಿಯಾಗಿ ತೇಜಸ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ಪ್ರಕಾಶ್ ಪೂಜಾರಿ, ಕೋಶಾಧಿಕಾರಿಯಾಗಿ ವಿಠ್ಠಲ ದೇವಾಡಿಗ, ಭಜನಾ ಸಂಚಾಲಕರಾಗಿ ಹರೀಶ್ ಬಿ, ಲೆಕ್ಕ ಪರಿಶೋಧಕರಾಗಿ ಕೃಷ್ಣಪ್ಪ ದೇವಾಡಿಗ, ಗೌರವ ಸಲಹೆಗಾರರಾಗಿ ಚಂದ್ರಹಾಸ ಪೂಜಾರಿ, ಸುಂದರ ದೇವಾಡಿಗ, ನಾರಾಯಣ ನಾಯ್ಕ, ವಿಶ್ವನಾಥ ದೇವಾಡಿಗ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ 30 ಮಂದಿಯನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಕಾರ್ಯಾಧ್ಯಕ್ಷ ಗೋಪಾಲ ಶೆಟ್ಟಿ, ಗೌರವ ಸಲಹೆಗಾರರಾದ ಸುಂದರ ದೇವಾಡಿಗ, ನಾರಾಯಣ ನಾಯ್ಕ, ವಿಶ್ವನಾಥ ದೇವಾಡಿಗ, ಮಹಿಳಾ ಸಮಿತಿ ಅಧ್ಯಕ್ಷೆ ಶಶಿಕಲಾ ಜಗದೀಶ್ ಉಪಸ್ಥಿತರಿದ್ದರು.ನವೀನ್ ಜಿ. ಕಾರ್ಯಕ್ರಮ ನಿರೂಪಿಸಿ, ಪ್ರವೀಣ್ ಪೂಜಾರಿ ವಂದಿಸಿದರು.









