ಕನ್ಯಾಡಿ 2 : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

0

ಕನ್ಯಾಡಿ 2 : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ 2, 2026- 27ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವದ ಕಾರ್ಯಕ್ರಮ ಮತ್ತು”ಪೋಷಕರ – ಶಿಕ್ಷಕರ ಮಹಾ ಸಭೆ” ಜೂನ್ 01 ರಂದು ವಿಜೃಂಭಣೆಯಿಂದ ನಡೆಯಿತು.

ಶಾಲೆಯ ದ್ವಾರದಿಂದ ಮಕ್ಕಳನ್ನು ಬಲೂನ್ ಕೊಟ್ಟು ಬ್ಯಾಂಡ್ ,ವಾದ್ಯ ಘೋಷದೊಂದಿಗೆ ಅತಿಥಿಗಳಾದ ಗಾಯತ್ರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧರ್ಮಸ್ಥಳ, ಪವಿತ್ರ ಸುಕುಮಾರ ಶೆಟ್ಟಿ , ಎಸ್ ಡಿ ಎಮ್ ಸಿ ಅಧ್ಯಕ್ಷ ಕೆ.ನಂದ , ಗೌರವ ಸಲಹೆಗಾರ ರಾಜೇಂದ್ರ ಅಜ್ರಿ , ಶ್ರೀಯುತ. ನೀಲಕಂಠ ಶೆಟ್ಟಿ, ಹಿರಿಯ ವಿದ್ಯಾರ್ಥಿ ಸುದರ್ಶನ್ ಕನ್ಯಾಡಿ, ಕಿರಣ್ , ಎಸ್‌ಡಿ ಎಂ ಸಿ ಯ ಸದಸ್ಯರು, ಮುಖ್ಯ ಶಿಕ್ಷಕಿ ಪುಷ್ಪಾ . ಎನ್ ಮತ್ತು ಶಿಕ್ಷಕ ವೃಂದ , ಪೋಷಕ ವೃಂದದವರು ಸ್ವಾಗತಿಸಿದರು. ಎಲ್ಲಾ ಮಕ್ಕಳಿಗೆ ಸಿಹಿಯನ್ನು ಹಂಚಿದರು.

ನಂತರ ಪೋಷಕ ಶಿಕ್ಷಕರ ಮಹಾ ಸಭೆಯನ್ನು ದೀಪ ಬೆಳಗಿಸುವುದರ ಮೂಲಕ ಶುಭ ಆರಂಭಗೊಂಡಿತು. ಪೋಷಕರ ಸಮ್ಮುಖದಲ್ಲಿ ಅತಿಥಿಗಳ ಕೈಯಿಂದ ಉಚಿತ ಪುಸ್ತಕವನ್ನು ಸಾಂಕೇತಿಕವಾಗಿ ವಿತರಿಸಲಾಯಿತು . ಪೋಷಕರಿಗೆ ಶೈಕ್ಷಣಿಕ ಮಾಹಿತಿಗಳನ್ನು ಮುಖ್ಯೋಪಾಧ್ಯಾಯಿನಿ ಪುಷ್ಪಾ ಎನ್ ನೀಡಿದರು ಗಾಯತ್ರಿ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ಧರ್ಮಸ್ಥಳ ಶೈಕ್ಷಣಿಕವಾಗಿ ಮಕ್ಕಳಿಗೆ ಪೋಷಕರ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಶಾಲೆಯ ಸರ್ವತೋಮುಖ ಅಭಿವೃದ್ಧಿಯ ಕಡೆಗೆ ಪೋಷಕರ ಮತ್ತು ಸಮಿತಿಯವರ ಪಾತ್ರದ ಬಗ್ಗೆ ತಿಳಿಸಿ ಎಲ್ಲರಿಗೂ ಶುಭವನ್ನು ಹಾರೈಸಿದರು.

ಹಿರಿಯ ವಿದ್ಯಾರ್ಥಿ ಹಾಗೂ ಗೌರವ ಸಲಹೆಗಾರ ರಾಜೇಂದ್ರ ಆಜ್ರಿಯವರು ಶುಭವನ್ನು ಹಾರೈಸಿದರು . ಸಹಶಿಕ್ಷಕಿ ದೀಪಿಕಾ ಸ್ವಾಗತಿಸಿ , ಜೆಸಿಂತಾ ನೊರೊನ್ಹಾ ವಂದಿಸಿದರು.ಸಹ ಶಿಕ್ಷಕಿ ಅರ್ಚನಾ. ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here