







ಅಳದಂಗಡಿ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಅಳದಂಗಡಿ ಶಾಖೆಯ ವತಿಯಿಂದ ಸಾರ್ವಜನಿಕರಿಗಾಗಿ ಉಚಿತ ವೈದ್ಯಕೀಯ, ನೇತ್ರ ತಪಾಸಣಾ, ದಂತ ಚಿಕಿತ್ಸಾ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಈ ಬೃಹತ್ ಶಿಬಿರವು ಜೂನ್ 7ರ ಆದಿತ್ಯವಾರದಂದು ಪೂರ್ವಾಹ್ನ 9.30 ರಿಂದ ಅಪರಾಹ್ನ 12.30 ರವರೆಗೆ ಇಲ್ಲಿನ ಶ್ರೀ ಗುರು ಸಭಾ ಭವನದಲ್ಲಿ ನಡೆಯಲಿದೆ.


ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯ ಹಾಗೂ ದೇರಳಕಟ್ಟೆಯ ಯೆನೆಪೊಯ ದಂತ ಕಾಲೇಜು ಮತ್ತು ಆಸ್ಪತ್ರೆಯ ಸಮುದಾಯ ದಂತ ಆರೋಗ್ಯ ವಿಭಾಗದ ನುರಿತ ತಜ್ಞ ವೈದ್ಯರ ತಂಡವು ಶಿಬಿರದಲ್ಲಿ ವೈದ್ಯಕೀಯ ಸೇವೆ ನೀಡಲಿದ್ದಾರೆ.ಲಭ್ಯವಿರುವ ಪ್ರಮುಖ ಚಿಕಿತ್ಸೆಗಳು:ಸಾಮಾನ್ಯ ವೈದ್ಯಕೀಯ ತಪಾಸಣೆ ಹಾಗೂ ಉಚಿತ ಔಷಧಿ ವಿತರಣೆ.ನೇತ್ರ ತಪಾಸಣೆ ಮತ್ತು ಸಂಘದ ವತಿಯಿಂದ ಅರ್ಹರಿಗೆ ಉಚಿತ ಕನ್ನಡಕ ವಿತರಣೆ.ದಂತ ತಪಾಸಣೆ ಹಾಗೂ ಅತ್ಯಾಧುನಿಕ ದಂತ ಚಿಕಿತ್ಸೆಗಳು.ಮಧುಮೇಹ (ಶುಗರ್) ಮತ್ತು ರಕ್ತದೊತ್ತಡ (ಬಿಪಿ) ಉಚಿತ ತಪಾಸಣೆ.ಮುಂದಿನ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳಿಗೆ ಹಸಿರು ಕಾರ್ಡ್ (Green Card) ಸೌಲಭ್ಯ.
ಇದೇ ಸಂದರ್ಭದಲ್ಲಿ ಸಾರ್ವಜನಿಕ ಜೀವ ರಕ್ಷಣೆಗಾಗಿ ವಿಶೇಷ ರಕ್ತದಾನ ಶಿಬಿರವನ್ನೂ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ಹಮ್ಮಿಕೊಂಡಿರುವ ಈ ಉಚಿತ ಶಿಬಿರದ ಪ್ರಯೋಜನವನ್ನು ಸಂಘದ ಸದಸ್ಯರು ಹಾಗೂ ಅಳದಂಗಡಿ ಪರಿಸರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಡೆದುಕೊಳ್ಳಬೇಕಾಗಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.









