ರೈತರ ನೋಂದಣಿ (Farmer ID) ಹೊಂದಿರುವ ರೈತರಿಗೆ ಇ-ಕೆವೈಸಿ ಕಡ್ಡಾಯ -ಕೃಷಿ ಇಲಾಖೆ ಸೂಚನೆ

0

ಬೆಳ್ತಂಗಡಿ: ರೈತರ ನೋಂದಣಿ (Farmer ID) ಹೊಂದಿರುವ ರೈತರು ಕೇಂದ್ರ ಸರ್ಕಾರದ ಸೆಂಟ್ರಲ್ ಐಡಿ (ಸಿಐಡಿ) ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದ್ದು. ಮಾಡದೇ ಹೋದಲ್ಲಿ ಮುಂದೆ ತಮಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಬೆಳೆ ವಿಮೆ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಸೌಲಭ್ಯ ವಂಚಿತರಾಗಬಹುದಾಗಿದ್ದು,, ಎಲ್ಲಾ ರೈತರು ಇ-ಕೆವೈಸಿ ಮಾಡಿಸುವಂತೆ ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಬೆಳ್ತಂಗಡಿ ತಾಲ್ಲೂಕಿನಲ್ಲಿ 15870 ರೈತರು ಇ-ಕೆವೈಸಿ ಮಾಡಿಕೊಳ್ಳಲು ಬಾಕಿ ಇರುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಈ ನೋಂದಣಿ ಪ್ರಕ್ರಿಯೆಯು ಮುಕ್ತಾಯಗೊಳ್ಳಲಿದ್ದು, ಕೃಷಿ ಜಮೀನು ಹೊಂದಿರುವ ತಾಲ್ಲೂಕಿನ ಎಲ್ಲಾ ರೈತರು ಇ-ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.ನೋಂದಣಿಗೆ ಏನೇನು ಬೇಕು?ರೈತ ಐಡಿ ಮಾಡಿಕೊಳ್ಳಲು ಪಹಣಿ ಪತ್ರ, ರೈತರ ಆಧಾರ್ ಕಾರ್ಡ್, ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಇತ್ಯಾದಿ ಅವಶ್ಯಕವಾಗಿದೆ.ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ಕಂದಾಯ ಅಥವಾ ತೋಟಗಾರಿಕೆ ಇಲಾಖೆಯ ಕಛೇರಿಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳೊಂದಿಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಈ ಪ್ರಕ್ರಿಯೆಯು ಪೂರ್ಣಗೊಳ್ಳಲು ಒಟ್ಟು 3 ಬಾರಿ ಒಟಿಪಿ ಪಡೆಯಲಾಗುತ್ತದೆ. ಹಾಗಾಗಿ ರೈತರು ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಪೋನ್ ನೊಂದಿಗೆ ಇ-ಕೆವೈಸಿ ಮಾಡಿಕೊಳ್ಳುವ ಸಮಯದಲ್ಲಿ ಖುದ್ದಾಗಿ ಹಾಜರಿರಬೇಕು.’ಅಗ್ನಿಸ್ಟಾಕ್’ ಉಪಕ್ರಮದ ಪ್ರಯೋಜನ:ಕೇಂದ್ರ ರೈತ ಐಡಿಯು ರೈತರ ಆಧಾರ್ ಮತ್ತು ಭೂದಾಖಲೆಗಳೊಂದಿಗೆ ನೇರವಾದ ಸಂಪರ್ಕವನ್ನು ಹೊಂದಿರುತ್ತದೆ. ಕೇಂದ್ರ ಸರ್ಕಾರದ ‘ಅಗ್ನಿಸ್ಟಾಕ್’ ಉಪಕ್ರಮದ ಭಾಗವಾಗಿರುವ ಈ ಡಿಜಿಟಲ್ ಐಡಿಯು ರೈತರ ಭೂದಾಖಲೆಗಳು, ಆಧಾರ್ ಮತ್ತು ಬ್ಯಾಂಕ್ ವಿವರಗಳನ್ನು ಒಂದೇ ದತ್ತಸಂಚಯದಲ್ಲಿ ಸಂಯೋಜಿಸುತ್ತದೆ. ಇದರಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಿ, ನೇರವಾಗಿ ರೈತರ ಖಾತೆಗೆ ಹಣ ವರ್ಗಾಯಿಸಲು ಸಾಧ್ಯವಾಗುತ್ತದೆ.

LEAVE A REPLY

Please enter your comment!
Please enter your name here