ಕೆಪಿಸಿಸಿ ನೂತನ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್, ನೂತನ ಸಚಿವ ಯು. ಟಿ. ಖಾದರ್ ಇವರಿಗೆ ಗೆಜ್ಜೆಗಿರಿ ಕ್ಷೇತ್ರದಿಂದ ಗೌರವ

0

ಬೆಳ್ತಂಗಡಿ : ಬಿಲ್ಲವ ಸಮಾಜದ ಹಿರಿಯ ಮುಖಂಡರು,ವಿಧಾನ ಪರಿಷತ್ತಿನ ಸದಸ್ಯರು, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗೌರವ ಸಲಹೆಗಾರ ಬಿ. ಕೆ. ಹರಿಪ್ರಸಾದ್ ರವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಇವರನ್ನು ಮತ್ತು ವಿಧಾನ ಸಭಾ ಸಭಾಪತಿಯಾಗಿದ್ದು ಪ್ರಸ್ತುತ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಯು. ಟಿ. ಖಾದರ್ ಇವರನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿ ವತಿಯಿಂದ ಬೆಂಗಳೂರಿನಲ್ಲಿ ಪದಾಧಿಕಾರಿಗಳು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

ಗೆಜ್ಜೆಗಿರಿ ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಬಿರುವ, ಉಪಾಧ್ಯಕ್ಷ ದೀಪಕ್ ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯ ದಿನೇಶ್ ಅಮೀನ್ ಕುಂದಾಪುರ, ಶ್ರೀ ಸುರೇಶ್ ಕೋಟ್ಯಾನ್ ಮೂಡಬಿದ್ರಿ, ಎಚ್.ಎಸ್. ಮುರಳಿಧರ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here